ಮುನಿರಾಬಾದ್: ಶ್ರಾವಣ ಮಾಸದ ಮೊದಲ ಹಬ್ಬ ನಾಗಚೌತಿ ಮತ್ತು ನಾಗ ಪಂಚಮಿಯನ್ನು ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ಮತ್ತು ಸೋಮವಾರ ವಿಶೇಷವಾಗಿ ಮಹಿಳೆಯರು ಸಂಭ್ರಮದಿಂದ ಆಚರಿಸಿದರು.

ದೇವರಿಗೆ ರೊಟ್ಟಿಯ ನೈವೇದ್ಯ: ಭಾನುವಾರ ‘ರೊಟ್ಟಿ’ ಹಬ್ಬದ ಅಂಗವಾಗಿ ಸಜ್ಜೆ ಮತ್ತು ಜೋಳದ ರೊಟ್ಟಿ, ಕಾಳಿನ ಪಲ್ಯ, ಬದನೇಕಾಯಿ, ವಿವಿಧ ಬಗೆಯ ಸೊಪ್ಪು, ಮೂಲಂಗಿ ಪಚಡಿ, ಪುಡಿ ಚಟ್ನಿ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಸಮರ್ಪಿಸಿ ತಾವೂ ಸೇವಿಸದರು.

ಗ್ರಾಮೀಣ ಪ್ರದೇಶದಲ್ಲಿ ಜೋಳದ ರೊಟ್ಟಿ ಮತ್ತು ಪಲ್ಯ ಪ್ರತಿದಿನದ ಸಾಮಾನ್ಯ ಆಹಾರವಾಗಿದ್ದು, ವರ್ಷದಲ್ಲಿ ಒಂದು ದಿನ ಮಾತ್ರ ವಿಶೇಷವಾಗಿ ರೊಟ್ಟಿ ಮಾಡಿ, ಅದೇ ರೊಟ್ಟಿಯನ್ನು ದೇವರಿಗೆ ನೈವೇದ್ಯ ಮಾಡುವ ವಿಶಿಷ್ಟ ಸಂಪ್ರದಾಯ ಗ್ರಾಮೀಣರಲ್ಲಿ ಹಾಸು ಹೊಕ್ಕಾಗಿದೆ. ಜೋಳ ಮತ್ತು ಸಜ್ಜೆಯ ರೊಟ್ಟಿ, ವಿವಿಧ ಪಲ್ಯ, ಪುಡಿ ಚಟ್ನಿಯನ್ನು ಬಾಂಧವ್ಯ ವೃದ್ಧಿಗೆ ನೆರೆಹೊರೆಯವರಿಗೆ ಹಂಚುವ ಮೂಲಕ ಪರಸ್ಪರ ಹಬ್ಬದ ಸಂಭ್ರಮ ವಿನಿಮಯ ಮಾಡಿಕೊಳ್ಳುತ್ತಾರೆ.

ನಾಗರಪಂಚಮಿ: ನಾಗರ ಪಂಚಮಿ ಅಂಗವಾಗಿ ಮನೆಯಲ್ಲಿ ಮತ್ತು ದೇವಸ್ಥಾನ ಆವರಣದಲ್ಲಿನ ನಾಗಪ್ಪನಿಗೆ (ಆದಿಶೇಷ) ಹಾಲೆರೆದು, ವಿಶೇಷ ಪೂಜೆ ಸಲ್ಲಿಸಿದರು. ನಾಗರಪಂಚಮಿಯ ಅಂಗವಾಗಿ ಮನೆಯಲ್ಲಿ ಶೇಂಗಾ, ಎಳ್ಳು, ಪುಟಾಣಿ ಹಿಟ್ಟು, ರವೆ ಉಂಡಿ ಗಾರಿಗೆ ಸೇರಿದಂತೆ ವಿವಿಧ ಸಿಹಿ ಖಾದ್ಯಗಳನ್ನು ಸವಿದರು.

ಉಳಿದ ಉಂಡಿ ಮತ್ತು ಗಾರಿಗೆಗಳನ್ನು ಸಂಬಂಧಿಕರು ಮತ್ತು ದೂರದ ಊರಿನ ಆಪ್ತರಿಗೆ ಕಳಿಸುವುದು ವಾಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.