ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಿ: ಅಧಿಕಾರಿ ವೀರಭದ್ರಪ್ಪ ಸಲಹೆ

Last Updated 17 ಫೆಬ್ರುವರಿ 2021, 12:44 IST
ಅಕ್ಷರ ಗಾತ್ರ

ಗಂಗಾವತಿ: ‘ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು’ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ವೀರಭದ್ರಪ್ಪ ವಿ.ಗೊಂಡಬಾಳ ಹೇಳಿದರು.

ಇಲ್ಲಿನ ಪಂಪಾನಗರದಲ್ಲಿರುವ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ 2020-21ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬುಧವಾರ ನಡೆದ ನಲಿ–ಕಲಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಮೂರನೇ ತರಗತಿಯಲ್ಲಿ ನಲಿ-ಕಲಿ ತರಬೇತಿ ನೀಡುತ್ತಿದ್ದು, ಇದಕ್ಕೆ ನಿರ್ದಿಷ್ಟ ಪಠ್ಯ ಪುಸ್ತಕವಿಲ್ಲ. ಇದು ಚಟುವಟಿಕೆ ಆಧಾರಿತ ಕಲಿಕಾ ಪದ್ಧತಿ. ಕೋವಿಡ್-19 ಸಂದರ್ಭದಲ್ಲಿ ಆಲ್‌ಲೈನ್‌ನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಪ್ರಶಿಕ್ಷಣಾರ್ಥಿಗಳಿಗೆ ನಲಿ-ಕಲಿ ತರಬೇತಿ ತುಂಬಾ ಉಪಯುಕ್ತ. ಇದರ ಸದುಪಯೋಗ ಪಡೆದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು’ ಎಂದರು.

ಕಲ್ಮಠ ಡಿ‌‌.ಇಡಿ ಕಾಲೇಜಿನ ಪ್ರಾರ್ಚಾಯ ಲೋಕೇಶ ಎಂ. ಮಾತನಾಡಿ,‘ಪ್ರಶಿಕ್ಷಣಾರ್ಥಿಗಳಿಗಾಗಿ ಎರಡು ದಿನ ನಲಿ-ಕಲಿ ತರಬೇತಿ ಆಯೋಜಿಸಿದ್ದು, ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಶಿಕ್ಷಣ ಸಂಯೋಜಕಿ ಸುಮಂಗಲಾ, ಶೈಕ್ಷಣಿಕ ಆಡಳಿತಾಧಿಕಾರಿ ಗುರುಬಸವರಾಜ್, ಸಂಪನ್ಮೂಲ ವ್ಯಕ್ತಿಗಳಾದ ಛತ್ರಪ್ಪ, ಗುರುರಾಜ್ ಕುಲಕರ್ಣಿ, ಹನುಮಂತಪ್ಪ ಚವ್ಹಾಣ್, ನಲಿಕಲಿ ತರಬೇತಿ ಕಾರ್ಯಕ್ರಮಧಿಕಾರಿ ಸುಜಾತ ಎಲ್.ಡಿ, ಎನ್.ಎಸ್.ಎಸ್ ಕಾರ್ಯಕ್ರಮಧಿಕಾರಿ ಮಂಜುನಾಥ ಮಳಗಾವಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT