ಕೊಪ್ಪಳ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸಿರುವ ಸಾಧಕರಿಗೆ ನೀಡಲಾಗುವ ರಾಷ್ಟ್ರ ಮಟ್ಟದ ಗೌರವ ಫೆಲೋಷಿಫ್ಗೆಕುಕನೂರಿನಡಾ.ಉದಯ ಶಂಕರ ಪುರಾಣಿಕ್ ಆಯ್ಕೆಯಾಗಿದ್ದಾರೆ.

ಈ ಫೆಲೊಶಿಪ್ ಅನ್ನುರಾಜ್ಯಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರತಿವರ್ಷ ನೀಡುತ್ತಿದೆ. 2022ರ ಸಾಲಿಗೆ ಡಾ.ಉದಯ ಶಂಕರ ಪುರಾಣಿಕ ಇಡೀ ಕಲ್ಯಾಣ ಕರ್ನಾಟಕದಿಂದ ಮೊದಲ ಸಲ ಆಯ್ಕೆಯಾಗಿದ್ದಾರೆ.

ಹಿರಿಯ ಸಾಹಿತಿ ದಿವಂಗತ ಕಾವ್ಯಾನಂದ ಡಾ.ಸಿದ್ಧಯ್ಯ ಪುರಾಣಿಕ ಅವರ ಸಹೋದರ ಸಾಹಿತಿ ಅನ್ನದಾನಯ್ಯ ಪುರಾಣಿಕ ಪುತ್ರರಾಗಿರುವ ಇವರು ಬೆಂಗಳೂರಿನಲ್ಲಿ ನೆಲೆಸಿ ಕನ್ನಡ ತಂತ್ರಾಂಶ ಸೇರಿದಂತೆ ತಂತ್ರಜ್ಞಾನದಲ್ಲಿ ವಿಶೇಷ ಸಂಶೋಧನೆ ಮಾಡಿದ್ದಾರೆ. ಈಗ ರಾಷ್ಟ್ರೀಯ ಗೌರವ ಸಂದಿರುವುದಿಂದ ಅವರ ಸಂಶೋಧನೆಗೆ ಇನ್ನಷ್ಟು ಪ್ರೋತ್ಸಾಹ ದೊರೆತಂತೆ ಆಗಿದೆ.

ಕಸಾಪ ನಿಕಟ ಪೂರ್ವ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ರಾಜಶೇಖರ ಅಂಗಡಿ, ಮಂಜುನಾಥ ಅಂಗಡಿ, ಸಂತೋಷ ದೇಶಪಾಂಡೆ, ರಮೇಶ ತುಪ್ಪದ, ಚನ್ನಪ್ಪ ಕಡ್ಡಿಪುಡಿ, ಶರಣಗೌಡ ಪಾಟೀಲ್ ಮುಂತಾದವರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.