‘ಏಯ್ ಈ ವಿಲ್ ಯಾಕ್ರಲಾ ಮಾಡ್ತಾರೆ?’ ಕೇಳಿದ ಗುದ್ಲಿಂಗ.

‘ತಮ್ ಕಾಲ ಆದ್ಮೇಲೆ ತಮ್ಮ ಆಸ್ತಿ–ಪಾಸ್ತಿ ಬಗ್ಗೆ ಯಾರೂ ಸೊಲ್ ಎತ್ತದಂತೆ ವಿಲ್ ಮಾಡ್ತಾರೆ. ಕೆಲವು ಸಾರಿ ಈ ವಿಲ್ಲೂ ಗುಲ್ಲಾಗುತ್ತೆ’.

‘ಈ ತರ ಗುಲ್ಲಾಗಿರೋ ಶಾನೆ ವಿಲ್ಗಳು ಇವೆಯಂತೆ! ಷೇಕ್ಸ್ಪಿಯರ್ ತನ್ನ ಹೆಂಡತಿ ಹಾಥ್ವೇಗೆ ತನ್ನ ‘ಸೆಕೆಂಡ್ ಬೆಸ್ಟ್ ಬೆಡ್’ ಕೊಟ್ಟು ಮಿಕ್ಕದ್ದನ್ನೆಲ್ಲಾ ಮಗಳ ಹೆಸರಿಗೆ ವಿಲ್ ಬರೆದಿದ್ನಂತೆ’.

‘ಇನ್ನೊಬ್ರು ಬಿಲಿಯನೇರ್ ಲಿಯೋನ ಅನ್ನೋರು ತಮ್ಮ ನಾಯಿಗೆ 8 ಮಿಲಿಯನ್ ಡಾಲರ್ ಬರೆದು ಹೋಗಿದ್ರಂತೆ’.

‘ಅಯ್ಯೋ, ಮನುಷ್ಯ ಜನ್ಮ ದೊಡ್ಡದು ಅನ್ನೋದೇ ಸುಳ್ಳು, ನಾಯಿ, ಬೆಕ್ಕುಗಳಿಂತ ಕಡೆ ನಮ್ ಬಾಳು’ ಹಲುಬಿದ ಕಲ್ಲೇಶಿ.

‘ಜಾಕ್ ಬೆನ್ನಿ ಅನ್ನೋ ಕಮಿಡಿಯನ್ ಬದುಕಿರುವಷ್ಟು ದಿವಸ ತನ್ನ ಹೆಂಡ್ತಿಗೆ ಒಂದು ಗುಲಾಬಿ ಹೂವು ಕೊಡೋ ತರ ವ್ಯವಸ್ಥೆ ಮಾಡಿ ವಿಲ್ ಮಾಡಿದ್ನಂತೆ’.

‘ಇಲ್ ವಿಲ್ ಬರೆಯೋದೇ ಬೇಡ, ಹಾಗೇ ಗುಲಾಬಿ ಕೊಡೋ ಜನ ಇದಾರೆ’.

‘ಇದೆಲ್ಲಾ ಬಿಡಿ, ಹೌದಿನಿ ಅನ್ನೋ ಮೆಜಿಶಿಯನ್ ತನ್ನ ಹೆಂಡ್ತಿ ಪ್ರತಿವರ್ಷ ತನ್ನ ಆತ್ಮನ ಕರೆದು ಸೀಆನ್ಸ್ ಮಾಡ್ಬೇಕು ಅಂತ ವಿಲ್ ಬರ್ದಿದ್ನಂತೆ! 10 ವರ್ಷ ಕರುದ್ರೂ ಬರ್ಲಿಲ್ಲ ಅಂತ ಅವನ ಹೆಂಡ್ತಿ ಅದನ್ನ ಕೈ ಬಿಟ್ಲಂತೆ’.

‘ಏನೋ ಬರೆಯೋದು ಬರ್ದಿದಾನೆ... ಆಮೇಲೆ ಅವನ ಆತ್ಮಕ್ಕೆ ಹೆಂಡ್ತಿ ಮುಂದೆ ಬರೋಕೆ ಧೈರ್ಯ ಆಗಿಲ್ಲ ಅನ್ಸುತ್ತೆ’.

‘ನಮ್ಮಲ್ಲಿ ಊರ್ನೇ ಒತ್ತರಿಸಿಕೊಂಡು ತಮ್ ಹೆಸರಿಗೆ ಬರುಸ್ಕೊಳೋರು ಇದಾರೆ. ಆದರೆ, ಒನ್ನಿ ನೂರ್ಮಿ ಅನ್ನೋನು ಬೂಟು ಕಂಪನೀಲಿದ್ದ ತನ್ನ 7,600 ಷೇರ್ನ ತನ್ನೂರಿಗೆ ಒಳ್ಳೇದು ಮಾಡಕ್ಕೆ ಬರೆದಿದ್ನಂತೆ, ನೀನೂ ಯಾಕ್ ಒಂದು ವಿಲ್ ಬರೀಬಾರದು ಪರಮಿ?’

‘ಅಯ್ಯೋ! ಉಳ್ಳವರು ಬರೆಯುವರು ವಿಲ್ಲು? ನಾನೇನು ಬರೆಯಲಿ ಎಲ್ಲೆಲ್ಲೂ ಬರೀ ಸ್ಕಲ್ಲು ( ಬುರುಡೆ)! ಈಗ ಕಂತೆಗಟ್ಟಲೆ ಇರೋ ಪುಸ್ತಕಗಳನ್ನ ಯಾರಿಗೆ ವಿಲ್ ಬರುದ್ರೂ ಮೂಸ್ ನೋಡಲ್ಲ’ ಎಂದ ಪರ್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.