ಬೆಂಗಳೂರು: ಎಡಗೈ ಮಧ್ಯಮ ವೇಗಿ ವೈಭವ್ ಶರ್ಮಾ (37ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ಎದುರಿಸುವಲ್ಲಿ ತಡವರಿಸಿದ ಹಿಮಾಚಲ ಪ್ರದೇಶ ತಂಡವು ಕೂಚ್ ಬಿಹಾರ್ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 162 ರನ್ಗಳಿಗೆ ಆಲೌಟ್ ಆಯಿತು.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ದಿನವಾದ ಭಾನುವಾರ ಟಾಸ್ ಗೆದ್ದ ಆತಿಥೇಯರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯೋಜನೆಗೆ ತಕ್ಕಂತೆ ದಾಳಿ ನಡೆಸಿ, ಎದುರಾಳಿ ತಂಡವನ್ನು 68.5 ಓವರ್ಗಳಲ್ಲಿ ಕಟ್ಟಿಹಾಕಿದರು. ಈಸಾ ಪುತ್ತಿಗೆ (26ಕ್ಕೆ2), ಅಕ್ಷತ್ ಪ್ರಭಾಕರ್ (40ಕ್ಕೆ2) ಹಾಗೂ ರತನ್ ಬಿ.ಆರ್. (2ಕ್ಕೆ29) ಅವರು ವೈಭವ್ಗೆ ಉತ್ತಮ ಸಾಥ್ ನೀಡಿದರು.

ಮಧ್ಯಮ ಕ್ರಮಾಂಕದ ಆಟಗಾರ ಅಕ್ಷಯ್ ಪಿ. ವಸಿಷ್ಠ (49; 90 ಎ) ಹಾಗೂ ಬಾಲಂಗೋಚಿ ಲಕ್ಷ್ಯ ಕುಮಾರ್ (ಔಟಾಗದೇ 30) ಹೊರತುಪಡಿಸಿದರೆ, ಉಳಿದವರ್ಯಾರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.

ಬಳಿಕ, ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು 15 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ. ಮೊದಲ ಇನಿಂಗ್ಸ್ ಬಾಕಿ ಚುಕ್ತಾ ಮಾಡಲು ಇನ್ನೂ 126 ರನ್ ಬೇಕಿದ್ದು, ಆದೇಶ್ ಡಿ. ಅರಸ್ (ಔಟಾಗದೇ 15) ಹಾಗೂ ಧ್ರುವ್ ಕೃಷ್ಣನ್ (ಔಟಾಗದೇ 17) ಕ್ರೀಸ್ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಹಿಮಾಚಲ ಪ್ರದೇಶ: 68.5 ಓವರ್ಗಳಲ್ಲಿ 162 (ಅಕ್ಷಯ್ ಪಿ. ವಸಿಷ್ಠ 49, ಲಕ್ಷ್ಯ ಕುಮಾರ್ ಔಟಾಗದೇ 30, ವೈಭವ್ ಶರ್ಮಾ 37ಕ್ಕೆ4). ಕರ್ನಾಟಕ: 15 ಓವರ್ಗಳಲ್ಲಿ 1 ವಿಕೆಟ್ಗೆ 36 (ಆದೇಶ್ ಡಿ. ಅರಸ್ ಔಟಾಗದೇ 15, ಧ್ರುವ್ ಕೃಷ್ಣನ್ ಔಟಾಗದೇ 17, ಶಿವಾನ್ಶ್ ಕೆ. 13ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.