ಕಾರಟಗಿ ತಾಲ್ಲೂಕಿನ ಬೂದಗುಂಪಾ ಗ್ರಮದ ಜಮೀನಿನಲ್ಲಿ ತೊಗರಿ ಬೆಳೆ ವೀಕ್ಷಿಸುತ್ತಿರುವ ಕೃಷಿ ಅಧಿಕಾರಿ ನಾಗರಾಜ್
ವಿಪರೀತ ಗೊಬ್ಬರ ಕ್ರಿಮಿನಾಶಕದಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ರೈತರು ಭತ್ತದ ಬೆಳೆಗೆ ಹೊಂದಿಕೊಳ್ಳದೇ ಅನೇಕ ಲಾಭದಾಯಕವಾದ ಬೆಳೆಯತ್ತ ವಾಲಬೇಕಿದೆ. ಇದರಿಂದ ಭೂಮಿಯ ಫಲವತ್ತತೆ ಉಳಿದು ಬಂಜರು ಆಗುವುದು ತಪ್ಪುವುದು. ಪರ್ಯಾಯ ಮಾರ್ಗದತ್ತ ರೈತ ಸಮುದಾಯ ವಾಲಿದರೆ ಭೂಮಿಗೆ ಭವಿಷ್ಯವಿದೆ.
ನಾಗರಾಜ್ ರ್‍ಯಾವಳದ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಕಾರಟಗಿ.
ಕೊನೆಯ ಹಂತದಲ್ಲಿ ಬಂದ ಅಕಾಲಿಕ ಮಳೆಯಿಂದ ಇಳುವರಿ ಕೆಲವೆಡೆ ಕುಂಠಿತವಾಗಬಹುದು. ನಮ್ಮ ಭೂಮಿಯಲ್ಲಿ ಸಮೃದ್ದ ಬೆಳೆ ಇದ್ದು ಎಕರೆಗೆಗೆ 6-7 ಕ್ವಿಂಟಲ್ ತೊಗರಿ ಬೆಳೆ ಬರಲಿದೆ. ಮಿತ ನೀರಾವರಿ ಬೆಳೆಯಲ್ಲಿ ಖರ್ಚು ಕಡಿಮೆ ಲಾಭ ಅಧಿಕ. ಇದೇ ಮಾದರಿಯನ್ನು ರೈತರು ಅಳವಡಿಸಿಕೊಳ್ಳಬೇಕು.
ಅಮರೇಶ ಮೈಲಾಪುರ ಶಿಕ್ಷಕ ಹಾಗೂ ಕೃಷಿ ಪ್ರಿಯ
ನಮ್ಮ 3 ಎಕರೆಯಲ್ಲಿ ತೊಗರಿ ಬೆಳೆಯನ್ನು ವಿಳಂಬವಾಗಿ ಬೆಳೆಯಲಾಯಿತು. ಮಂಜು ಹಾಗೂ ಮಳೆಯಿಂದ ಇಳುವರಿ ಕಡಿಮೆಯಾಗಬಹುದು. ದರ ಅಧಿಕವಾಗಿ ದೊರಯಬಹುದು ಎಂಬ ನಿರೀಕ್ಷೆ ನಮ್ಮದು.