ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ ಪೀಕಾರ್ಡ್ ಬ್ಯಾಂಕ್ ಸುಪರ್ ಸೀಡ್..?

ಸಹಕಾರಿ ಇಲಾಖೆಗೆ ಪತ್ರ ಬರೆದ ಶಾಸಕ ಹಾಲಪ್ಪ ಆಚಾರ
Last Updated 21 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕೊಪ್ಪಳ: ರೈತರ ನೆರವಿಗೆ ಬರಬೇಕಾದಯಲಬುರ್ಗಾಪೀಕಾರ್ಡ್ ಬ್ಯಾಂಕ್ ಹಣ ದುರುಪಯೋಗ ಆರೋಪದ ಮೇಲೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಹಕಾರ ಇಲಾಖೆ ಸೂಚನೆ ನೀಡಿದ್ದರೂ, ಮತ್ತೊಂದು ಹಗರಣ ನಡೆದು ಮತ್ತೆ ಸುದ್ದಿಯಲ್ಲಿದೆ.

ಈ ಬ್ಯಾಂಕ್ ಅವ್ಯವಸ್ಥೆಯಿಂದ ರೋಸಿ ಹೋದ ಶಾಸಕ ಹಾಲಪ್ಪ ಆಚಾರ್ ಸುಪರ್ ಸೀಡ್ ಮಾಡುವಂತೆ ಸಹಕಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕಳೆದ ವರ್ಷ ವ್ಯವಸ್ಥಾಪಕ ಪಿ.ಕೆ.ದುಮ್ಮಾಳ್ ₹ 25,99,663ನಗದನ್ನು ಕೇಂದ್ರ ಬ್ಯಾಂಕ್‌ಗೆ ವರ್ಗಾವಣೆ ಮಾಡದೇ ದುರುಪಯೋಗಪಡಿಸಿಕೊಂಡಿದ್ದು,ಸಹಕಾರ ಇಲಾಖೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈಗ ಮತ್ತೆ₹ 8,19,395 ನಗದು ದುರುಪಯೋಗವಾದ ಬಗ್ಗೆ ಸಹಕಾರ ಇಲಾಖೆಯ ಉಪನಿಬಂಧಕರ ಗಮನಕ್ಕೆ ಬಂದಿದ್ದು, ತನಿಖೆಗೆ ಆದೇಶಿಸಲಾಗಿದೆ.

ಈಚೆಗೆ ಈ ನೇಮಕಗೊಂಡ ಅನಿಲ್ ಕೆಳಗೇರಿ ಅವ್ಯವಹಾರದಲ್ಲಿ ಪಾಲ್ಗೊಂಡು ಅಮಾನತು ಆಗಿದ್ದಾರೆ. ಸುಮಿತ್ರಾ ಮನಗಾವಿಯವರೆಗೆ ಅಧಿಕಾರ ಹಸ್ತಾಂತರಿಸಿದ ನಂತರ ಬ್ಯಾಂಕಿನಲ್ಲಿ ಬಾಕಿ ಉಳಿದ 8 ಲಕ್ಷ ಹಣದ ದಾಖಲೆ ತೋರಿಸದೇ ಇರುವುದರಿಂದ ಅನುಮಾನ ಮೂಡಿದ್ದು, ಸಹಕಾರಿ ಇಲಾಖೆ ಉಪನಿಬಂಧಕರು ತನಿಖೆಗೆ ಆದೇಶ ನೀಡಿದ್ದಾರೆ.

ಐದು ವರ್ಷದ ಮಹಾಸಭೆ ಕೋರಂ ಇಲ್ಲ. ಸಹಕಾರ ಕಾಯ್ದೆ ಪ್ರಕಾರ 64ರ ಅಡಿ ವಿಚಾರಣೆ ನಡೆದಿದ್ದರೂ ಶಿಕ್ಷೆ ಆಗಿಲ್ಲ. ನಗದು ಪುಸ್ತಕದಲ್ಲಿ ಅನಿಲ್ ಅವರು ಹಣ ದುರಪಯೋಗ ಮಾಡಿಕೊಂಡ ಬಗ್ಗೆ ಕೇಂದ್ರ ಕಚೇರಿಗೆ ತಿಳಿಸದೇ ಗೋಪ್ಯವಾಗಿ ಇಟ್ಟುಕೊಂಡಿದ್ದಾರೆ. ವಾರ್ಷಿಕ ಮಹಾಸಭೆಯ ಆಡಿಟ್ ವರದಿ ಸಲ್ಲಿಸಿಲ್ಲ. ಕಟ್ಟಡ ನಿರ್ಮಾಣಕ್ಕೆ ಬಂದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಕೇಂದ್ರ ಬ್ಯಾಂಕ್ ಸಿಬ್ಬಂದಿ ನೇಮಕ ಮಾಡಿದ್ದರೂ ಅವರ ಹಾಜರಾತಿಯನ್ನು ತಿರಸ್ಕರಿಸಿದ್ದಾರೆ ಎಂಬುವುದು ಸೇರಿದಂತೆ 14 ಆರೋಪಗಳನ್ನು ಶಾಸಕ ಹಾಲಪ್ಪ ಆಚಾರ ಮಾಡಿ ಸರ್ಕಾರಕ್ಕೆ ಸುಪರ್‌ಸೀಡ್ ಮಾಡುವಂತೆ ಪತ್ರ ಬರೆದಿದ್ದಾರೆ.

'ಸಹಕಾರ ಇಲಾಖೆ, ಕೇಂದ್ರ ಬ್ಯಾಂಕ್ ಕಚೇರಿ ಮಹಾಸಭೆಗೆ ವ್ಯವಸ್ಥಾಪಕ ಹಾಜರಾಗಿಲ್ಲ. ಸಭೆಯಲ್ಲಿ ಜಮಾ, ಖರ್ಚು ಅನುಮೋದನೆ ಪಡೆದಿಲ್ಲ. ಸಿಬ್ಬಂದಿ ಇಲ್ಲದಾಗ ಕಡತಗಳು ಅಧ್ಯಕ್ಷರ ಸುಪರ್ದಿಯಲ್ಲಿ ಇರುವುದು ಕೇಂದ್ರ ಬ್ಯಾಂಕಿನ ಸಿಬ್ಬಂದಿ ಹೋದಾಗ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸುಪರ್ ಸೀಡ್ ಮಾಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಪ್ಪ ದೇಸಾಯಿ ಪ್ರತಿಕ್ರಿಯಿಸಿ, 'ಕಳೆದ ಬಾರಿ ಆದ ಹಣ ದುರುಪಯೋಗದ ಕುರಿತು ನಡೆದ64 ವಿಚಾರಣೆ ಸರಿಯಾಗಿ ನಡೆದಿಲ್ಲ. ತನಿಖಾಧಿಕಾರಿ ಸರಿಯಾದ ಮಾಹಿತಿಯನ್ನು ಉಪನಿಬಂಧಕರ ಗಮನಕ್ಕೆ ತಂದಿಲ್ಲ.64 ವಿಚಾರಣೆ ನಂತರ69 ವಿಚಾರಣೆ ಆಗಿ ಶಿಕ್ಷೆ ಆಗಬೇಕಿತ್ತು. ಈ ಮಧ್ಯೆ ನಗದು ಹಣ ದುರುಪಯೋಗವಾದ ಬಗ್ಗೆ ಇದೀಗ ಉಪನಿಬಂಧಕರ ಗಮನಕ್ಕೆ ಬಂದಿದೆ. ಈ ಬ್ಯಾಂಕ್‌ನ ಎಲ್ಲ ಹಗರಣಗಳ ಕುರಿತು ಕೇಂದ್ರ ಬ್ಯಾಂಕ್ ಗಮನಕ್ಕೆ ತರಲಾಗಿದೆ' ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT