ಗಂಗಾವತಿ: ಎರಡು ವಾರಗಳು ಕಳೆದಿದ್ದರೆ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದ ಜೋಡಿ ಭಾನುವಾರ ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದ ಸಮೀಪದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮದುವೆಯ ಪೂರ್ವಭಾವಿಯಾಗಿ ಅವರು ಶೂಟಿಂಗ್ ಸಲುವಾಗಿ ಮುನಿರಾಬಾದ್ಗೆ ತೆರಳಿ ಗಂಗಾವತಿ ಮಾರ್ಗವಾಗಿ ಮುಸ್ಟೂರು ಗ್ರಾಮಕ್ಕೆ ವಾಪಸ್ ಬರುವಾಗ ದುರ್ಘಟನೆ ನಡೆದಿದೆ.
.ಕೊಪ್ಪಳ: ಬಡ್ತಿಯಲ್ಲಿ ಅನ್ಯಾಯ; ಸರಿಪಡಿಸಲು ಸರ್ಕಾರಿ ನೌಕರರ ಆಗ್ರಹ .
ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದ್ದು, ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಕರಿಯಪ್ಪ ಮಡಿವಾಳ ( 26) ಹಾಗೂ ಕಾರಟಗಿ ತಾಲ್ಲೂಕಿನ ಮುಸ್ಟೂರು ಗ್ರಾಮ ಕವಿತಾ (19) ಮೃತಪಟ್ಟವರು ಎಂದು ತಿಳಿದುಬಂದಿದೆ. ಇವರ ವಿವಾಹ ಡಿ. 21ರಂದು ನಿಶ್ಚಯವಾಗಿತ್ತು.

ಮದುವೆ ಸಿದ್ಧತೆಯಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಮಾಡಿಸಲು ತೆರಳಿದ್ದರು. ಐದು ತಿಂಗಳ ಹಿಂದೆ ಇವರ ನಿಶ್ಚಿತಾರ್ಥ ನಡೆದಿತ್ತು. ಮುನಿರಾಬಾದ್ ಸುತ್ತಮುತ್ತಲಿನ ಜಾಗದಲ್ಲಿ ಫೋಟೊ ಹಾಗೂ ವಿಡಿಯೊಗಳನ್ನು ತೆಗೆಯಿಸಿಕೊಂಡು ಸಂಭ್ರಮ ಪಟ್ಟಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ನಡೆದ ಘಟನೆಯಿಂದಾಗಿ ಎರಡೂ ಕುಟುಂಬಗಳಲ್ಲಿ ನೋವು ಮನೆಮಾಡಿತ್ತು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ಕೊಪ್ಪಳ| ಸ್ವಾತಂತ್ರ್ಯಕ್ಕೆ ವಕೀಲರ ಕೊಡುಗೆ ಅನನ್ಯ: ಗಂಗಾಧರ ಜಿ.ಎಂ. ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.