ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ | ಮದ್ಯದ ಅಂಗಡಿ ತೆರೆಯದಂತೆ ಆಗ್ರಹಿಸಿ ಪ್ರತಿಭಟನೆ

Published 3 ಅಕ್ಟೋಬರ್ 2023, 7:24 IST
Last Updated 3 ಅಕ್ಟೋಬರ್ 2023, 7:24 IST
ಅಕ್ಷರ ಗಾತ್ರ

ಕಾರಟಗಿ: ಮದ್ಯದ ಅಂಗಡಿ ಹೆಚ್ಚಿಸಿ, ಗಾಂಧಿ ಜಯಂತಿ ಆಚರಿಸಲು ಸರ್ಕಾರಕ್ಕೆ ನೈತಿಕ ಹಕ್ಕು ಇಲ್ಲ. ಮದ್ಯದ ಅಂಗಡಿಗಳ ಮಂಜೂರಾತಿಯ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)ದ ಕನಕಗಿರಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಜ್ಮೀರ್ ಸಿಂಗನಾಳ ಓತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ, ಸರ್ಕಾರ ಗಾಂಧಿ ಜಯಂತಿ ದಿನದಂದು ಮದ್ಯ ಮಾರಾಟ ಸ್ಥಗಿತಗೊಳಿಸುತ್ತದೆ. ಇನ್ನೊಂದೆಡೆ ಮದ್ಯದ ಹೊಸ ಅಂಗಡಿ ತೆರೆಯಲು ಮುಂದಾಗಿದೆ. ಈ ಇಬ್ಬಗೆಯ ನೀತಿಯನ್ನು ಸರ್ಕಾರ ಕೈಬಿಡಬೇಕು ಎಂದರು.

ಪದಾಧಿಕಾರಿಗಳಾದ ದಾವೂದ್, ಉಮರ್ ಫಾರೂಕ್ ಜಂಗಮರ ಕಲ್ಗುಡಿ, ವಿಮೆನ್ ಇಂಡಿಯಾ ಮೂಮೆಂಟ್‌ನ ಉಮ್ಮೆ ರೂಮನ್, ಶಾಹೀನ್‌ಖಾನ್, ಗಂಗಾವತಿ ಕ್ಷೇತ್ರ ಸಮಿತಿ ಅಧ್ಯಕ್ಷ ಸೈಯದ್ ಫಾತಿಮಾ ಹಾಗೂ ಇತರ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT