ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದ ವೈನ್‌ಶಾಪ್‌ನಿಂದ ಕುದುರಿಮೋತಿ ಗ್ರಾಮದ 30ರಿಂದ 40 ಹೋಟೆಲ್, ಕಿರಾಣಿ ಅಂಗಡಿಗಳು ಮತ್ತು ಪಾನ್‌ಶಾಪ್‌ಗಳಿಗೆ ಅಕ್ರಮವಾಗಿ ಮದ್ಯ ಸಾಗಾಟ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ಸೇರಬೇಕಾದ ರಾಜಸ್ವ ಸೋರಿಕೆಯಾಗುತ್ತಿದೆ. ಸಕ್ರಮವಾಗಿರುವ ಮದ್ಯದ ಅಂಗಡಿಗಳ ಮುಂದೆ ಕೆಲ ಕಿಡಿಗೇಡಿಗಳು ಪದೇ ಪದೇ ಜಗಳ ಮಾಡುತ್ತಿದ್ದು, ಅವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.