ಕಾರಟಗಿಯ ಸಿದ್ದೇಶ್ವರ ರಂಗ ಮಂದಿರದ ಆವರಣದಲ್ಲಿ ಹಾಕಿದ್ದ ಭತ್ತದ ರಾಸಿಯನ್ನು ಮಳೆಯಿಂದ ರಕ್ಷಿಸುವಲ್ಲಿ ಅನೇಕ ರೈತರು ನಿರತರಾಗಿದ್ದರು
ಭತ್ತ ಕಟಾವು ಮಾಡಿದ್ದು ಎಪಿಎಂಸಿ ಆವರಣದಲ್ಲಿ ಒಣಗಿಸಲು ಹಾಕಿದ್ದೇವೆ. ವಾತಾವರಣ ನಮ್ಮನ್ನು ಹೈರಾಣಾಗಿಸಿದೆ. ಇಳುವರಿಯೂ ಕಡಿಮೆಯಾಗಿದ್ದು ವರ್ತಕರೂ ಖರೀದಿಗೆ ಮುಂದಾಗುತ್ತಿಲ್ಲ.
–ಹುಚ್ಚಪ್ಪ ಕುರಿ, ರೈತ ಕಾರಟಗಿ
ಕಟಾವು ಯಂತ್ರಗಳಿಗೆ ನಿಗದಿಯಾದ ದರ ನೀಡಲು ಸಿದ್ಧರಿದ್ದರೂ ಯಂತ್ರಗಳು ಸಕಾಲಕ್ಕೆ ಸಿಗುತ್ತಿಲ್ಲ. ಇಳುವರಿ ದರ ಕಡಿಮೆಯಾದ ಚಿಂತೆಯಲ್ಲಿದ್ದೇವೆ. ಆಗಾಗ ಸುರಿಯುವ ಜಿಟಿ–ಜಿಟಿ ಮಳೆ ನಮ್ಮ ಬಾಳನ್ನು ಇನ್ನಷ್ಟು ಬರಡಾಗಿಸುತ್ತಿದೆ.
–ವೆಂಕಟೇಶ ಕಟ್ಟೀಮನಿ, ರೈತ ಕಾರಟಗಿ
ಕಳೆದ ಬಾರಿಗಿಂತ ದರ ಕಡಿಮೆ
ಕಳೆದ ಬಾರಿ 75 ಕೆಜಿ ಭತ್ತಕ್ಕೆ ₹2300ಕ್ಕೂ ಹೆಚ್ಚಿನ ದರವಿತ್ತು. ಈ ಬಾರಿ ಆರ್‌ಎನ್‌ಆರ್ ಭತ್ತ ₹2 ಸಾವಿರ ಸಮೀಪವಿದ್ದರೆ ಉಳಿದ ಭತ್ತದ ದರ ₹1600 ಸಮೀಪವಿದೆ. ನಮ್ಮಲ್ಲಿನ ಭತ್ತ ಹೆಚ್ಚಾಗಿ ತಮಿಳುನಾಡಿಗೆ ಸರಬರಾಜಾಗುತ್ತದೆ. ಅಲ್ಲಿನ ಬೇಡಿಕೆಗೆ ಅನುಗುಣವಾಗಿ ಇಲ್ಲಿ ದರ ನಿಗದಿಯಾಗುತ್ತದೆ. ಭತ್ತ ಗುಣಮಟ್ಟದಿದ್ದರೂ ಕಳೆದ ಬಾರಿಗಿಂತ ದರ ಕಡಿಮೆಯಿದೆ ಎಂದು ಕಾರಟಗಿಯ ವರ್ತಕ ವಿಜಯಕುಮಾರಸ್ವಾಮಿ ಹಿರೇಮಠ ಹೇಳಿದರು.