ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮತ್ತೆ ಮಳೆಯ ಸಿಂಚನ; ರೈತರಲ್ಲಿ ಮಂದಹಾಸ

Published 15 ಮೇ 2024, 4:14 IST
Last Updated 15 ಮೇ 2024, 4:14 IST
ಅಕ್ಷರ ಗಾತ್ರ

ಕೊಪ್ಪಳ: ಬರಗಾಲ, ಬಿರುಬಿಸಿಲು ಹಾಗೂ ಬಿಸಿಗಾಳಿಗೆ ಬೇಸತ್ತು ಹೋಗಿದ್ದ ಜಿಲ್ಲೆಯ ಜನರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಖುಷಿ ನೀಡಿದೆ. ಕೃಷಿ ಚಟುವಟಿಕೆಗೆ ಸಿದ್ಧರಾಗುತ್ತಿರುವ ರೈತರಲ್ಲಿಯೂ ಮಳೆಯ ಹನಿಗಳು ಮಂದಹಾಸ ಮೂಡಿಸಿವೆ.

ಮಂಗಳವಾರ ತಡರಾತ್ರಿಯಿಂದ ಬುಧವಾರದ ಬೆಳಗಿನ ಜಾವದ ತನಕ ಕೊಪ್ಪಳ, ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಮುನಿರಾಬಾದ್‌, ಕುಕನೂರು, ಗಂಗಾವತಿ ಸೇರಿದಂತೆ ಜಿಲ್ಲೆಯ ಹಲವು ಕಡೆ ಉತ್ತಮವಾಗಿ ಮಳೆಯಾಗಿದೆ. ಹನುಮಸಾಗರದಲ್ಲಿ ಬೆಳಗಿನ ಜಾವ 4.30ರ ತನಕ ಮಳೆ ಬಂದಿದೆ. ಗಂಗಾವತಿಯೊಂದರಲ್ಲಿಯೇ 2.6 ಸೆಂ.ಮೀ. ಮಳೆಯಾಗಿದೆ.

ಎರಡು ದಿನಗಳ ಹಿಂದೆಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಮೂರು ತಿಂಗಳಿಂದ ಜನ ಬಿಸಿಲು ಮತ್ತು ಅರೆಝಳಕ್ಕೆ ರೋಸಿ ಹೋಗಿದ್ದರು. ಮಳೆ ಬರಲು ಆರಂಭಿಸಿದ ಬಳಿಕ ಬಿಸಿಲಿನ ತಾಪವೂ ಕಡಿಮೆಯಾಗಿದ್ದು, ತಂಪನೆಯ ವಾತಾವರಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT