ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ವಿದ್ಯುತ್‌ ಕಂಬ, ಗಿಡಗಳು ನೆಲಕ್ಕೆ

ಬಿರುಗಾಳಿ, ಸಿಡಿಲು, ಗುಡುಗಿನ ಆರ್ಭಟ
Published 23 ಮೇ 2024, 16:27 IST
Last Updated 23 ಮೇ 2024, 16:27 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು ವಿದ್ಯುತ್‌ ಕಂಬಗಳು, ಗಿಡಮರಗಳು ನೆಲಕ್ಕುರುಳಿವೆ.

ಮಳೆಗಿಂತ ಗಾಳಿ, ಸಿಡಿಲು, ಗುಡುಗಿನ ಆರ್ಭಟ ಜೋರಾಗಿದ್ದರಿಂದ ವಿದ್ಯುತ್‌ ಕಂಬಗಳಿಗೇ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ತಿಳಿದಿದೆ. ಮದಲಗಟ್ಟಿ ಗ್ರಾಮದ ಜಮೀನಿನಲ್ಲಿ ವಿದ್ಯುತ್‌ ಪರಿವರ್ತಕ ಸಹಿತ ಕಂಬಗಳು ಮುರಿದುಬಿದ್ದಿವೆ. ಅನೇಕ ನರ್ಸರಿಗಳಿಗೂ ಹಾನಿಯಾಗಿದೆ. ಗಿಡಮರಗಳ ಕೊಂಬೆಗಳು ಎಲ್ಲೆಂದರಲ್ಲಿ ಮುರಿದುಬಿದ್ದಿವೆ. ಇನ್ನೂ ಅನೇಕ ಗ್ರಾಮಗಳಲ್ಲಿಯೂ ಇದೇ ರೀತಿ ಹಾನಿ ಸಂಭವಿಸಿದೆ. ಆದರೆ ಎಲ್ಲಿಯೂ ಪ್ರಾಣಾಪಾಯವಾದ ವರದಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT