ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಡಬಲ್ ಸ್ಟ್ಯಾಂಡ್ ಗಿರಾಕಿ: ಶಿವರಾಜ ತಂಗಡಗಿ

Published 20 ಏಪ್ರಿಲ್ 2024, 4:23 IST
Last Updated 20 ಏಪ್ರಿಲ್ 2024, 4:23 IST
ಅಕ್ಷರ ಗಾತ್ರ

ಗಂಗಾವತಿ: ‘ಜನಾರ್ದನ ರೆಡ್ಡಿ ಡಬಲ್ ಸ್ಟ್ಯಾಂಡ್ ಗಿರಾಕಿಯಿದ್ದಂತೆ. ಮಾತನಾಡುವುದು ಒಂದು, ಮಾಡುವುದು ಇನ್ನೊಂದು. ಅವರ ಬಾಯಿಂದ ಬರುವುದೆಲ್ಲವೂ ಸುಳ್ಳೇ ಸುಳ್ಳು. ಸುಳ್ಳು ಹೇಳಲು ತರಬೇತಿ ಪಡೆದಿದ್ದಾರೆ’ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿ ‘ರೆಡ್ಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕೆಆರ್‌ಪಿಪಿ ಸೇರುವಾಗ ಫುಟ್‌ಬಾಲ್‌ ಹಿಂದೆ ಹೋಗಬೇಡಿ. ರೆಡ್ಡಿ ಸಹವಾಸ ಮಾಡಿ ಅನುಭವಿಸಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೆ. ಆದರೂ ರೆಡ್ಡಿ ಸುಳ್ಳಿನ ಮಾತಿಗೆ ಮರುಳಾಗಿ ಪಕ್ಷ ಸೇರಿ ಗೆಲ್ಲಿಸಿದ್ದೀರಿ. ನಿಮ್ಮ ಅಭಿವೃದ್ಧಿ ಕೆಲಸವಾಗುತ್ತಿವೆಯೇ’ ಎಂದು ಪ್ರಶ್ನಿಸಿದರು.   

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿ ‘ಕ್ಷೇತ್ರದಲ್ಲಿ ಯಾರು ಅಭಿವೃದ್ಧಿ ಕೆಲಸ ಮಾಡುತ್ತಾರೆ, ಯಾರು ಸುಳ್ಳು ಹೇಳುತ್ತಾರೆ ಎನ್ನುವುದು ತಿಳಿದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಕೆಲವರು ಸುಳ್ಳಿನಲ್ಲಿಯೇ ಕ್ಷೇತ್ರದ ಅಭಿವೃದ್ಧಿಯ ಕಥೆ ಕಟ್ಟುತ್ತಾರೆ’ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಮುಖಂಡ ಸಂಗಣ್ಣ ಕರಡಿ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿದರು.

ಪಕ್ಷದ ಮುಖಂಡರಾದ ವೆಂಕಟೇಶ ಬಾಬು, ಹರೀಶದ ಘಂಟಾ, ಶರೀಫ್ ಪಟ್ವಾರಿ ಸೇರಿಸಂ ಗಾಪುರ, ಬಂಡಿಬಸಪ್ಪ ಕ್ಯಾಂಪ್, ಮಲ್ಲಾಪುರ, ರಾಂಪುರ, ಬಸವನದುರ್ಗಾ, ಆನೆಗೊಂದಿ, ಸಾಣಾಪುರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಗಿಯದ ಕಾಂಗ್ರೆಸ್‌ ಬಣ ರಾಜಕಾರಣ

ಲೋಕಸಭಾ ಚುನಾವಣೆಯ ಪ್ರಚಾರ ಚುರುಕು ಪಡೆದುಕೊಂಡರೂ ಗಂಗಾವತಿ ಕ್ಷೇತ್ರದಲ್ಲಿ ಬಣ ರಾಜಕಾರಣ ಮುಗಿಯುತ್ತಿಲ್ಲ. ನಮ್ಮ ನಡುವೆ ಯಾವ ಅಸಮಾಧಾನ ಇಲ್ಲವೆಂದು ಪಕ್ಷದ ನಾಯಕರು ಹೇಳುತ್ತಿದ್ದರೂ ಆಂತರಿಕವಾಗಿ ಬೇಗುದಿ ಎದ್ದು ಕಾಣುತ್ತಿದೆ.

ಶುಕ್ರವಾರ ಸಂಗಾಪುರದಲ್ಲಿ ಸಮಾವೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌. ಶ್ರೀನಾಥ್‌ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಗೈರಾದರು. ಎರಡು ದಿನಗಳ ಹಿಂದೆ ಶ್ರೀನಾಥ್ ನಾಗಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಅವರ ತಂಡ ಗಂಗಾವತಿಯಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಅನ್ಸಾರಿ ಸೇರಿದಂತೆ ಹಲವರು ಪಾಲ್ಗೊಂಡಿರಲಿಲ್ಲ. ಹೀಗಾಗಿ ಗಂಗಾವತಿ ಕ್ಷೇತ್ರದಲ್ಲಿ ಪಕ್ಷದ ಎಲ್ಲ ಕಾರ್ಯಕ್ರಮಗಳು ಎರಡು ಬಾರಿ ನಡೆಸಬೇಕಾದ ಸ್ಥಿತಿಯಿದೆ.

ಸಂಗಾಪುರ ಕಾರ್ಯಕ್ರಮಕ್ಕೆ ಗೈರಾದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಚ್‌.ಆರ್‌. ಶ್ರೀನಾಥ್‌ ’ಸಮಾವೇಶಕ್ಕೆ ಯಾರೂ ಆಹ್ವಾನ ನೀಡಿಲ್ಲ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT