ಶೌಚಾಲಯ ಅಡುಗೆ ಕೋಣೆ ನಿರ್ಮಾಣ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲು ಅನೇಕ ಬಾರಿ ಗ್ರಾ.ಪಂ ಅವರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ
ಸಿದ್ದಪ್ಪ ಕಲಕೇರಿ ಎಸ್‌ಡಿಎಂಸಿ ಅಧ್ಯಕ್ಷ
ಶಾಲೆಯಲ್ಲಿ ಮೂಲ ಸೌಕರ್ಯ ಕೊರತೆ ಇರುವುದು ಗಮನದಲ್ಲಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು
ಹನುಮಂತಪ್ಪ ಬಿಇಒ ಕೊಪ್ಪಳ
ಅಡುಗೆ ಕೋಣೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದ್ದು ಕೂಡಲೇ ನರೇಗಾ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸುವಂ ತೆ ಮನವಿ ಮಾಡುತ್ತೇನೆ
ಮಲ್ಲಿಕಾರ್ಜುನ ಅಕ್ಷರ ದಾಸೋಹ ಅಧಿಕಾರಿ
ಕೂಡಲೇ ಸಿಬ್ಬಂದಿ ಮೂಲಕ ಸ್ವಚ್ಛ ಮಾಡಿಸಲಾಗುವುದು. ಶೌಚಾಲಯ ಹಾಗೂ ಅಡುಗೆ ಕೋಣೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು
ಮರಿಸ್ವಾಮಿ ಪಿಡಿಒ ಗ್ರಾ.ಪಂ ಬೆಟಗೇರಿ
ಅಡುಗೆ ಕೋಣೆ ಅಪೂರ್ಣ
ಇಲ್ಲಿನ ಶಾಲಾ ಆವರಣದಲ್ಲಿ ಅಡುಗೆ ಕೋಣೆ ಕಾಮಗಾರಿ ನಡೆಯುತ್ತಿದೆ. ಆದರೆ ಕೆಲ ದಿನಗಳಿಂದ ಅದು ಸ್ಥಗಿತಗೊಂಡಿದೆ. ಅಪೂರ್ಣವಾಗಿದೆ. ಇಲ್ಲಿನ ಶಾಲಾ ಆವರಣ ಸಮತಟ್ಟಿಲ್ಲದ ಕಾರಣ ಮಳೆಯಾದರೇ ಸಾಕು ಆವರಣ ಸಂಪೂರ್ಣ ಕೆರೆಯಂತಾಗುತ್ತದೆ.