ಕೊಪ್ಪಳ: ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕರ ಸಂಘದ ಬಳ್ಳಾರಿಯ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಇಲ್ಲಿನ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ಶರಣಬಸಪ್ಪ ಬಿಳಿಯೆಲೆ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡ ಉಪನ್ಯಾಸಕ ಗುಂಡೂರು ಪವನ್ ಕುಮಾರ್ (ಗಂಗಾವತಿ), ಉಪಾಧ್ಯಕ್ಷರಾಗಿ ಡಾ.ಶಿವರಾಜ ಗುರಿಕಾರ (ಯಲಬುರ್ಗಾ), ಡಾ.ಎನ್.ಜಿ.ಹೆ ಬಸೂರು (ಹೊಸಪೇಟೆ), ಬಸವರಾಜ ಹಂಪಿ.ವಿ., ಡಾ.ಕೆ.ಸಿ. ಕುಲಕರ್ಣಿ (ಗಂಗಾವತಿ), ಪ್ರೊ. ಕರಿಗೂಳಿ ಸುಂಕೇಶ್ವರ, ನಾರಾಯಣ ವೈದ್ಯ (ಕಾರಟಗಿ), ಶಂಕ್ರಯ್ಯ ಅಬ್ಬಿಗೇರಿಮಠ (ಇರಕಲ್ಲಗಡ), ಕಾರ್ಯದರ್ಶಿಯಾಗಿ ಅಭಿಷೇಕ ಡಿ.ಎಂ.(ಶ್ರೀರಾಮನಗರ), ಸಹಕಾರ್ಯದರ್ಶಿಯಾಗಿ ಚಂದ್ರಶೇಖರ ಬಿಳೆಗುಡ್ಡ (ಗಂಗಾವತಿ), ಅತಿಥಿ ಉಪನ್ಯಾಸಕ ಪ್ರತಿನಿಧಿ ಎ.ಕೆ. ಮಹೇಶಕುಮಾರ ಆಯ್ಕೆಯಾಗಿದ್ದಾರೆ.
ರಾಜ್ಯ ಸಮಿತಿಯ ಸದಸ್ಯರಾಗಿ ಸಿಂಡಿಕೇಟ್ ಸದಸ್ಯ ಡಾ.ಬಸವರಾಜ ಪೂಜಾರ, ವಿಭಾಗೀಯ ಪ್ರಮುಖರಾಗಿ ಶಿವಾನಂದ ಮೇಟಿಯವರು ಆಯ್ಕೆಯಾಗಿದ್ದಾರೆ ಎಂದು
ಎಂದು ರಾಜ್ಯಾಧ್ಯಕ್ಷ ಡಾ.ಗುರುನಾಥ ಬಡಿಗೇರ ತಿಳಿಸಿದ್ದಾರೆ. ಸಭೆಯಲ್ಲಿ ಡಾ.ಮರಿದೇವರುಮಠ, ಅಭಿಷೇಕ ಕುಬಸದ, ಸುರೇಂದ್ರ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.