ಭಾನುವಾರ, ಜನವರಿ 17, 2021
17 °C
ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌‌ ಹೇಳಿಕೆ

ಸಿದ್ದರಾಮಯ್ಯ ಗೋಮಾಂಸ ತಿನ್ನಲ್ಲ: ಓಲೈಸಲು ಹೇಳಿಕೆ: ಪ್ರಭು ಚವಾಣ್‌‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನಲ್ಲ. ಕೆಲವರನ್ನು ಓಲೈಸಲು ಹಾಗೆ ಹೇಳಿಕೆ ನೀಡುತ್ತಿರುತ್ತಾರೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೋ ಹತ್ಯೆ ನಿಷೇಧ ನೂತನ ಕಾನೂನು ಅಡಿ, ಗೋ ಹತ್ಯೆ ಮಾಡಿದರೆ ₹5 ಲಕ್ಷ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗೋಮಾಂಸ ತಿನ್ನಲು ಪ್ರಚೋದಿಸುವವರಿಗೂ ಶಿಕ್ಷೆ ವಿಧಿಸುವ ಅಂಶ ಸೇರಿಸುವ ಚಿಂತನೆಯೂ ಇದೆ’ ಎಂದರು.

‘ಸಿದ್ದರಾಮಯ್ಯ ಅವರು, ನಾನು ಗೋಮಾಂಸ ತಿನ್ನುತ್ತೇನೆ ಎಂದು ಎದೆತಟ್ಟಿಕೊಂಡು ಹೇಳುತ್ತಾರೆ. ಹಾಗೆ ಮಾಡಿದರೆ ಅವರನ್ನೂ ಒಳಗೆ ಹಾಕುತ್ತೇವೆ’ ಎಂದು ಹೇಳಿದರು.

‘ಈ ವಿಷಯದಲ್ಲಿ ಜನರ ಮನಸ್ಸನ್ನು ಘಾಸಿಗೊಳಿಸುವುದು ಕೂಡಾ ಕಾನೂನು ಬಾಹಿರ’ ಎಂದು ಎಚ್ಚರಿಕೆ ನೀಡಿದರು.

‘ಏನ್ರಿ ಪ್ರಭು ಚವ್ಹಾಣ್‌’ ಎಂದುಸಿದ್ದರಾಮಯ್ಯ ಶೈಲಿಯಲ್ಲಿ ಸಂಬೋಂಧಿಸಿಆಂಗಿಕ ಭಾವನೆ ಮಾಡಿ ಲೇವಡಿ ಮಾಡಿದ ಅವರು ‘ಗೋವು ಕೋಟ್ಯಂತರ ಹಿಂದೂಗಳಿಗೆ ಪೂಜ್ಯನೀಯವಾದ ಮತ್ತು ತಾಯಿ ಸ್ಥಾನದಲ್ಲಿರುವ ದೇವರ ಸ್ವರೂಪ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು