ಕೊಪ್ಪಳ: ಕಡಿಮೆ ಖರ್ಚು, ಹೆಚ್ಚು ಆದಾಯ ಎನ್ನುವ ಸೂತ್ರಕ್ಕೆ ಒಗ್ಗಿಕೊಂಡು ಕೃಷಿ ಚಟುವಟಿಕೆ ಮಾಡಬೇಕು ಎನ್ನುವವರಿಗೆ ಈಗ ಮಣ್ಣುರಹಿತ ಜಲಕೃಷಿ ಪ್ರಮುಖ ಆಕರ್ಷಣೆಯಾಗುತ್ತಿದೆ. ಗವಿಮಠದ ಜಾತ್ರೆಯ ಅಂಗವಾಗಿ ಇಲ್ಲಿನ ಮಠದ ಮೈದಾನದಲ್ಲಿ ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ಕೇವಲ ನೀರು ಹಾಗೂ ಪೋಷಾಕಾಂಶಗಳನ್ನು ಬಳಸಿ ಬೇಸಾಯ ಮಾಡುವುದೇ ಜಲಕೃಷಿಯಾಗಿದ್ದು, ಇದು ಸಂಪೂರ್ಣವಾಗಿ ಮಣ್ಣು ರಹಿತವಾಗಿದೆ. ಇದರಿಂದಾಗಿ ಸಾಮಾನ್ಯ ಕೃಷಿಗಿಂತಲೂ ಶೇ.75ರಷ್ಟು ನೀರು ಉಳಿತಾಯವಾಗುತ್ತದೆ. ಹವಾಮಾನ ವೈಪರೀತ್ಯದ ದುಷ್ಪರಿಣಾಮ ತಡೆಯುವುದು, ರೋಗ ಹಾಗೂ ಕೀಟಗಳ ಬಾಧೆಯಿಂದ ಮುಕ್ತಿ, ಕಸದಿಂದ ಮುಕ್ತ ಬೇಸಾಯ, ವರ್ಷಪೂರ್ತ ಉತ್ಪಾದನೆ, ನಿರಂತರ ಆದಾಯ ಮತ್ತು ತೋಟಗಾರಿಕಾ ಇಲಾಖೆಯಿದ ಗರಿಷ್ಠ ಸಹಾಯಧನದ ಸೌಲಭ್ಯಕ್ಕೆ ಜಲಕೃಷಿಗೆ ಇದೆ.

ಪ್ರದರ್ಶನ ನೋಡಲು ಬರುತ್ತಿರುವ ಜನ ಜಲಕೃಷಿಯ ಪ್ರಾತ್ಯಕ್ಷಿಕೆಯನ್ನು ಗಮನಿಸುತ್ತಿದ್ದು, ಅವರಿಗೆ ಇಲಾಖೆಯ ತರಬೇತುದಾರರು ಮಾಹಿತಿ ಒದಗಿಸುತ್ತಿದ್ದಾರೆ. ಅವರಿಗೆ ಈ ಮಾದರಿಯ ಪ್ರಯೋಗವನ್ನು ಮಾಡಲು ಬಯಸಿದರೆ ಬೇಕಾದ ಸಾಮಗ್ರಿ ಮತ್ತು ತರಬೇತಿ ಒದಗಿಸುತ್ತಾರೆ.

ಗಮನ ಸೆಳೆದ ವೃಕ್ಷಮಾತೆ:

ಫಲಪುಷ್ಪ ಪ್ರದರ್ಶನದಲ್ಲಿ ವೃಕ್ಷಮಾತೆ ದಿವಂಗತ ಸಾಲುಮರದ ತಿಮ್ಮಕ್ಕ ಅವರ ಚಿತ್ರವನ್ನು ನಾನಾ ಹೂಗಳಿಂದ ಅಲಂಕರಿಸಲಾಗಿದ್ದು, ಇದರ ಮುಂದೆ ನಿಂತು ಜನ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವುದು ಆಕರ್ಷಣೆಯಾಗುತ್ತಿದೆ.

ತೆಂಗಿನ ಕಾಯಿ ಮೂಲಕ ನಾನಾ ಕಲಾ ಆಕೃತಿಗಳನ್ನು ಕೆತ್ತನೆ ಮಾಡಿದ್ದ ಕಲಾಕೃತಿ, ಇತ್ತೀಚೆಗೆ ನಿಧನರಾದ ಶಾಸಕ ಶಾಮನೂರ ಶಿವಶಂಕರಪ್ಪ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ, ತೊಗಲುಗೊಂಬೆಯಾಟ ಕಲೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ತಾಲ್ಲೂಕಿನ ಮೋರನಾಳ ಗ್ರಾಮದ ಭೀಮವ್ವ ಶಿಳ್ಳಿಕ್ಯಾತರ್ ಅವರ ಭಾವಚಿತ್ರವನ್ನು ರಂಗೋಲಿ ಮೂಲಕ ಅರಳಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ.

ಕಲ್ಲಂಗಡಿ ಹಣ್ಣಿನ ಮೂಲಕ ಮಹನೀಯರ ಭಾವಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ವಿವಿಧ ಜಾತಿಯ ಅಣಬೆ ತಳಿಗಳು, ವಿದೇಶಿ ಹಣ್ಣು, ತರಕಾರಿ ಬೆಳೆಗಳು, ನೀರಾವರಿ ಮಾದರಿ ಪದ್ಧತಿ, ಜಲಕೃಷಿ, ಜೇನು ಸಾಕಾಣಿಕೆ, ಮಣ್ಣು ರಹಿತ ಕೃಷಿ, ತೋಟಗಾರಿಕೆ ಇಲಾಖೆಯ ನಾನಾ ಯೋಜನೆಗಳ ಮಾಹಿತಿಯ ಹೂರಣವಿದೆ. ತಂತ್ರಜ್ಞಾನದ ಮೂಲಕ ತೋಟಗಾರಿಕೆ ಬೆಳೆಯನ್ನು ಬೆಳೆಯುವಂತೆ ರೈತರಿಗೆ ಪ್ರದರ್ಶನವು ಹುರಿದುಂಬಿಸುತ್ತಿದೆ.

ಜಲಕೃಷಿ ಇತ್ತೀಚೆಗೆ ಪ್ರಸಿದ್ಧಿಯಾಗುತ್ತಿದ್ದು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಅನುಕೂಲವಾಗುತ್ತದೆ. ಈ ಮಾದರಿ ಅಳವಡಿಸಿಕೊಳ್ಳವವರಿಗೆ ನೆರವು ನೀಡಲಾಗುವುದು.
– ಕೃಷ್ಣ ಸಿ. ಉಕ್ಕುಂದ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ