ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಬಿತ್ತನೆ ಬೀಜ, ಕಲಿಕಾ ಸಾಮಗ್ರಿ ವಿತರಣೆ

Last Updated 15 ನವೆಂಬರ್ 2022, 12:54 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ಸಹಯೋಗದಲ್ಲಿ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಗ್ರಾಮಸ್ಥರಿಗೆ ಉಚಿತ ಬಿತ್ತನೆ ಬೀಜ, ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿ ವಿತರಿಸಲಾಯಿತು.

ಯೋಜನಾಧಿಕಾರಿ ಡಾ.ಸದಾಶಿವ ಕಾಂಬಳೆ ಮಾತನಾಡಿ, 34 ದೇಶಗಳಲ್ಲಿ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, 2026ರ ವೇಳೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಲಿದೆ ಎಂದರು.

ಚೈಲ್ಡ್ ಫಂಡ್ ಇಂಡಿಯಾ ಸಂಯೋಜಕ ಪ್ರಕಾಶ ಕಡಗದ ಮಾತನಾಡಿ, 125 ಮಕ್ಕಳಿಗೆ ಬ್ಯಾಗ್, ಪುಸ್ತಕ, ನೀರಿನ ಬಾಟಲ್ ಹಾಗೂ ಉನ್ನತ ಶಿಕ್ಷಣ ಪಡೆಯುವ 35 ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು, 80 ಸಣ್ಣ ರೈತರಿಗೆ ಮೆಕ್ಕೆಜೋಳದ ಬೀಜಗಳನ್ನು ವಿತರಿಸಲಾಯಿತು ಎಂದರು.

ಮುಕ್ಕುಂಪಿ ಗ್ರಾ.ಪಂ ಸದಸ್ಯ ಹನುಮಂತಪ್ಪ ತಳವಾರ, ಸಿದ್ದ ನಗೌಡ, ನರಸಪ್ಪ,ಯಮನಪ್ಪ, ಮಂಜುನಾಥ ಸಾಗರ, ಶಿವರಂಜನಿ, ವಿಜಯಲಕ್ಷ್ಮಿ, ಕಾಮಕ್ಷಿ, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT