ಪೋಸ್ಟ್ ಲೈಕ್ ಮಾಡಿದರೂ ಕ್ರಮದ ಎಚ್ಚರಿಕೆ
ಶಾಂತಿ ಕದಡುವ ರೀತಿಯಲ್ಲಿ ಸಾಮಾಜಿಕ ತಾಣಗಳಲ್ಲಿ ಸಂದೇಶಗಳನ್ನು ಹಾಕಿದವರ ಮೇಲೆ ದೂರು ದಾಖಲಿಸಲಾಗುತ್ತದೆ. ಆ ಸಂದೇಶವನ್ನು ಲೈಕ್ ಕಾಮೆಂಟ್ ಹಾಗೂ ಶೇರ್ ಮಾಡಿದವರ ಮೇಲೂ ಕ್ರಮ ಜರುಗಿಸಲಾಗುತ್ತದೆ. ನಿಮಗೆ ಅಹಿತಕರ ಸಂದೇಶ ಕಂಡುಬಂದರೆ ಪೊಲೀಸರಿಗೆ ಅಥವಾ 112ಗೆ ಮಾಹಿತಿ ನೀಡಬೇಕು ಎಂದು ಎಸ್.ಪಿ. ತಿಳಿಸಿದರು.