ಗಂಗಾವತಿ: ಇಲ್ಲಿನ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಈಚೆಗೆ ರಾಜ್ಯ ಸೀನಿಯರ್ ಪೆಂಕಾಕ್ ಸಿಲತ್ ಚಾಂಪಿಯನ್ಷಿಪ್ ನಡೆಯಿತು. ಈ ಟೂರ್ನಿ 17 ವರ್ಷದ ಒಳಗಿನವರ ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ತಂಡವನ್ನು ಆಯ್ಕೆ ಮಾಡಲು ನಡೆದ ಟ್ರಯಲ್ಸ್ ಕೂಡ ಆಗಿತ್ತು. ರಾಜ್ಯದ 12 ಜಿಲ್ಲೆಗಳಿಂದ 68 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಕಲಾ ಪ್ರದರ್ಶನ (ಪುರುಷ) ತುಂಗಲ್ ಏಕಪಟು ವಿಭಾಗದಲ್ಲಿ ಆಕಾಶ ದೊಡ್ಡವಾಡ –1, ಸೋಲೊ ಏಕಪಟು ವಿಭಾಗದಲ್ಲಿ ಸಚಿನ್ ಬಿ.ಆರ್.–1, ಗಾಂಡಾ ವಿಭಾಗದಲ್ಲಿ ಪಚೇಂದ್ರ ಎಚ್.ಡಿ –1, ರಿತೀಕ್, ನಂದಕುಮಾರ –2, ರೆಗು 3 ವಿಭಾಗದಲ್ಲಿ ಆಕಾಶ ದೊಡ್ಡವಾಡ, ಪ್ರದೀಪ ರಾಯಬಾಗಿ, ಮನೋಜ್ ಕುಮಾರ ಎ. ಪಿ –1ಸ್ಥಾನ ಪಡೆದುಕೊಂಡಿದ್ದಾರೆ.

ಲಿಟಲ್ ಹಾರ್ಟ್ಸ್ ಶಾಲೆ ಕಾರ್ಯದರ್ಶಿ ಹಾಗೂ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ ಮಾತನಾಡಿ ‘ಮಹಾರಾಷ್ಟ್ರದ ನಾಸಿಕ್ನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಜರುಗಲಿದೆ’ ಎಂದರು.

ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಉಪಾಧ್ಯಕ್ಷ ಬಿ.ಎಫ್ ಇಬ್ರಾಹಿಂ, ಪ್ರಗತಿ ಕ್ರೀಡಾ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಕಾಶ ಹುಡೇದ, ನಿರ್ದೇಶಕ ರಾಘವೇಂದ್ರ ಸಿರಿಗೇರಿ, ಭಾರತೀಯ ಪೆಂಕಾಕ್ ಸಿಲತ್ ಸಂಸ್ಥೆ ಮುಖ್ಯ ಪರಿವೀಕ್ಷಕ ಅಬ್ದುಲ್ ರಜಾಕ್ ಟೇಲರ್, ರಾಜ್ಯ ಪರಿವೀಕ್ಷಕ ಚಂದ್ರಶೇಖರ ವಿ.ಎಚ್, ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.