ಬುಧವಾರ, ಸೆಪ್ಟೆಂಬರ್ 22, 2021
22 °C

ಅಳವಂಡಿ: ಐವರು ವಿದ್ಯಾರ್ಥಿಗಳು ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಗ್ರಾಮದ ಎರಡು ಕೇಂದ್ರಗಳಲ್ಲಿ ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಸುಗಮವಾಗಿ ನಡೆಯಿತು.

ವಿದ್ಯಾರ್ಥಿಗಳು ಪಾಲಕರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು.

ಗ್ರಾಮದ ಮುದಕನಗೌಡ ಗಾಳಿ ಪ್ರೌಢಶಾಲೆಯಲ್ಲಿ 20 ಸಾಮಾನ್ಯ ಹಾಗೂ ಕೋವಿಡ್ ಲಕ್ಷಣ ಇರುವವರಿಗೆ 2 ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಲಾಗಿತ್ತು.

ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 119 ಬಾಲಕರು, 125 ಬಾಲಕಿಯರ ಪೈಕಿ ಇಬ್ಬರು ಗೈರಾಗಿದ್ದರು. ಒಟ್ಟು 242 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 9 ಸಾಮಾನ್ಯ ಹಾಗೂ ಕೋವಿಡ್ ಲಕ್ಷಣ ಇರುವವರಿಗೆ ಎರಡು ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಲಾಗಿತ್ತು.

ನೋಂದಾಯಿಸಿಕೊಂಡಿದ್ದ 98 ಬಾಲಕರು ಹಾಗೂ 122 ಬಾಲಕಿಯರ ಪೈಕಿ ಮೂವರು ಬಾಲಕಿಯರು ಗೈರಾಗಿದ್ದರು. ಒಟ್ಟು 217 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಪರೀಕ್ಷಾ ಕೇಂದ್ರದ ಸುತ್ತಮುತ್ತ ಪೋಲಿಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಮುಖ್ಯ ಅಧೀಕ್ಷಕ ಸುರೇಂದ್ರಗೌಡ ಪಾಟೀಲ, ವೀರಣ್ಣ ಮಟ್ಟಿ, ಪ್ರಶ್ನೆಪತ್ರಿಕೆ ಪಾಲಕ ಗಿರಿಯಪ್ಪ, ವಿಘ್ನೇಶ್ವರ, ಕಚೇರಿ ಸಹಾಯಕರಾದ ಮಹೇಶ ಮಾಳೆಕೊಪ್ಪ, ಸಮೀರ್, ಶಿಕ್ಷಕರಾದ ಸಿದಯ್ಯ ಹಿರೇಮಠ, ಕೃಷ್ಣ ಕೊರ್ಲಹಳ್ಳಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ, ಪೊಲೀಸ್ ಅಧಿಕಾರಿಗಳಾದ ಮಾತಂಡಪ್ಪ, ವಿರೇಶ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು