ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾವರಗೇರಾ: ಮದುವೆ ಸಮಾರಂಭದಲ್ಲಿ ಸಸಿ ವಿತರಣೆ

Published 5 ಜೂನ್ 2024, 16:08 IST
Last Updated 5 ಜೂನ್ 2024, 16:08 IST
ಅಕ್ಷರ ಗಾತ್ರ

ತಾವರಗೇರಾ: ಸ್ಥಳೀಯ ಸರ್ಕಾರಿ ಶಾಲಾ ಕಾಲೇಜುಗಳು, ಅರೆ ಸರ್ಕಾರಿ ,ಖಾಸಗಿ ಶಾಲೆಗಳಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.

ಸ್ಥಳಿಯ ಸರ್ ಎಂ ವಿಶ್ವೇಶ್ವರಯ್ಯ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ, ಮುಖ್ಯ ಶಿಕ್ಷಕ ಡಿ.ಆರ್.ಪಾಟೀಲ್, ಎಸ್‌.ಜಿ.ಹಿರೇಮಠ, ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.

ಸಮೀಪದ ಜುಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನದ ಪ್ರಯುಕ್ತ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಶಿಕ್ಷಕ ಸೋಮನಗೌಡ ಪಾಟೀಲ, ಶಿಕ್ಷಕರಾದ ಚಿದಾನಂದಪ್ಪ , ಅಕ್ಕಮ್ಮ, ಗೌರಮ್ಮ ಗೊಂದಳಿ, ವಿದ್ಯಾರ್ಥಿಗಳು ಹಾಜರಿದ್ದರು.

ಪಟ್ಟಣದ ಮೇಘಾ ಫಂಕ್ಷನ್ ಸಭಾಂಗಣದಲ್ಲಿ ಬುಧವಾರ ಮುಜಾವರ್ ಬಂಧುಗಳ ಮದುವೆಯ ನಿಖಾ ಕಾರ್ಯಕ್ರಮದಲ್ಲಿ ವಧು ವರರು ಸಸಿ ವಿತರಿಸಿದರು. ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಮುಖಂಡ ಅಯ್ಯನಗೌಡ ಮಾಲಿ ಪಾಟೀಲ್, ಮಹಮದ್ ಅಬ್ದುಲಾ ಜಾವೇದ್ ಹಾಜರಿದ್ದರು.

ತಾವರಗೇರಾ ಸಮೀಪದ ಜುಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ತಾವರಗೇರಾ ಸಮೀಪದ ಜುಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT