ಅಳವಂಡಿ: ‘ಇಂದಿನ ಸಾಕಷ್ಟು ಸಂಖ್ಯೆಯ ಯುವಕರು ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ವ್ಯಸನ ಮುಕ್ತ ಭಾರತವನ್ನು ನಿರ್ಮಿಸಲು ಯುವಕರ ಪಾತ್ರ ಪ್ರಮುಖವಾಗಿದೆ’ ಎಂದು ಕಾನೂನು ಕಾಲೇಜಿನ ಉಪ ಪ್ರಾಚಾರ್ಯ ಬಸವರಾಜು ಎಸ್.ಎಂ. ಹೇಳಿದರು.

ಸಮೀಪದ ಹಿರೇಸಿಂದೋಗಿ ಗ್ರಾಮದಲ್ಲಿ ಕೊಪ್ಪಳದ ಶ್ರೀಅಟಲ್ ಬಿಹಾರಿ ವಾಜಪೇಯಿ ಕಾನೂನು ಕಾಲೇಜು ಹಾಗೂ ಡೇಟ್ ಚಾರಿಟಬಲ್ ಸೊಸೈಟಿ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಶೇ 40ರಷ್ಟು ಜನರು ಯುವ ವಯಸ್ಸಿನಲ್ಲಿ ಮರಣ ಹೊಂದುತ್ತಿರುವದು ವಿಷಾದನೀಯ ಸಂಗತಿ. ಹೀಗಾಗಿ ಇವತ್ತಿನ ಯುವಕರು ವ್ಯಸನದಿಂದ ಮುಕ್ತಗೊಳಿಸುವ ಭವಿಷ್ಯ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ಮಾಡಬೇಕು ಎಂದರು.

ಡೇಟ್ ಚಾರಿಟಬಲ್ ಸೊಸೈಟಿಯ ಕೌನ್ಸಿಲರ್ ಹನುಮಂತಪ್ಪ ಮಾತನಾಡಿ, ವ್ಯಸನಕ್ಕೆ ಒಳಗಾದ ವ್ಯಕ್ತಿಗಳಿಗೆ ನಮ್ಮ ಆಸ್ಪತ್ರೆಯಿಂದ ಸಾಕಷ್ಟು ಸೌಲಭ್ಯಗಳು ಇರುತ್ತವೆ. ಕುಡಿತಕ್ಕೆ ಒಳಗಾದಂತ ವ್ಯಕ್ತಿಯನ್ನು ಮೊದಲು ಅವರನ್ನು ವೈದ್ಯಕೀಯ ಚಿಕಿತ್ಸೆ ಹಾಗೂ ಯೋಗದ ಮೂಲಕ ಮುಕ್ತರನ್ನಾಗಿ ಮಾಡಲಾಗುತ್ತದೆ. ಇಂದಿನ ದಿನಮಾನದಲ್ಲಿ 18 ರಿಂದ 30 ವರ್ಷಗಳ ಒಳಗೆ ಇರುವಂತಹ ವ್ಯಕ್ತಿಗಳು ಸಾಕಷ್ಟು ರೀತಿಯಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಇಂತವರನ್ನು ಸಂಸ್ಥೆ ವತಿಯಿಂದ ವ್ಯಸನದಿಂದ ಮುಕ್ತಗೊಳಿಸಲಾಗುತ್ತಿದೆ ಎಂದು ಹೇಳಿದರು.

ಹಿರಿಯ ಮುಖಂಡ ಕೊಟ್ರಪ್ಪ ಕೋಡಿ ಮಾತನಾಡಿದರು. ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಕುರಿತು ಶಿಬಿರಾರ್ಥಿಗಳಿಂದ ಕಿರು ನಾಟಕ ಪ್ರದರ್ಶಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ರುದ್ರಮುನಿ ಮಠದ, ಪ್ರಮುಖರಾದ ರಾಮಣ್ಣ ಚನ್ನಲ್, ವೆಂಕಟರಡ್ಡಿ ಹಾಜರಿದ್ದರು. ಪ್ರಕಾಶ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರವಿ ಹೊಸಳ್ಳಿ ಸ್ವಾಗತಿಸಿದರು. ಮಲ್ಲಯ್ಯ ವಂದಿಸಿದರು. ನಾಗಲಿಂಗಪ್ಪ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.