ಯಲಬುರ್ಗಾ: ನೆರೆ ರಾಜ್ಯ ಕೇರಳದಲ್ಲಿ ಅಳವಡಿಸಿ ಜಾರಿಗೊಳಿಸಿದ್ದ ‘ಯು’ ಆಕಾರದ (ಲಾಸ್ಟ್ ಬೆಂಚ್ ಇಲ್ಲದ) ಆಸನದ ವ್ಯವಸ್ಥೆಯನ್ನು ತಾಲ್ಲೂಕಿನ ಬಂಡಿಹಾಳ ಗ್ರಾಮದ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದು ಕೊಪ್ಪಳ ಜಿಲ್ಲೆಯಲ್ಲೇ ಮೊದಲ ಪ್ರಯೋಗ ಎಂಬ ಹಗ್ಗಳಿಕೆಗೆ ಪಾತ್ರವಾಗಿದೆ.

ಕೇರಳದಲ್ಲಿಯ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿದ್ದರ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶಿಕ್ಷಕರು ಆಸಕ್ತಿ ತೋರಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ಮೊದಲ ಮತ್ತು ಕೊನೆಯ ಬೆಂಚ್ ವಿದ್ಯಾರ್ಥಿ ಎಂಬುದರಲ್ಲಿ ಹೆಚ್ಚು ಕಡಿಮೆ ಎಂಬ ಭಾವನೆಗಳು ಮೂಡಬಾರದು, ಅನಗತ್ಯವಾದ ಭಿನ್ನತೆಯ ನಿವಾರಣೆ ಅಗತ್ಯವಿದೆ. ಪ್ರತಿ ವಿದ್ಯಾರ್ಥಿಯೂ ಒಂದೇ ರೀತಿಯಲ್ಲಿ ಕಾಣುವ ಉದ್ದೇಶ ಹಾಗೂ ವಿಶೇಷ ಗಮನ ಕೊಡಲು ಹೆಚ್ಚಿನ ಅವಕಾಶಗಳು ಈ ‘ಯು’ ಆಕಾರದ ವಿನ್ಯಾಸ ಆಸನ ವ್ಯವಸ್ಥೆಯಲ್ಲಿ ಕಂಡು ಬರುವುದರಿಂದ ಅಳವಡಿಸಲಾಗಿದೆ. ಇದು ನಿರೀಕ್ಷೆಗೂ ಮೀರಿ ಪರಿಣಾಮಕಾರಿಯಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಪಾಠದ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ. ಶಿಕ್ಷಕರು ವಿದ್ಯಾರ್ಥಿ ಬಳಿ ಹೋಗಿಯೇ ಪ್ರತಿಯೊಂದನ್ನು ಪರೀಕ್ಷಿಸಲು, ಪರಿಶೀಲಸಲು ಸಾಧ್ಯವಾಗುತ್ತದೆ. ಈ ವಿನ್ಯಾಸವನ್ನು ಪ್ರತಿಯೊಂದು ಕೊಠಡಿಯಲ್ಲಿ ಅಳವಡಿಸುವುದು ಹೆಚ್ಚು ಪ್ರಯೋಜನಕಾರಿಯಾಗುತ್ತದೆ’ ಎಂದು ಮುಖ್ಯ ಶಿಕ್ಷಕ ಪರಸಪ್ಪ ಸೊಬಗಿನ ಅಭಿಪ್ರಾಯಪಟ್ಟಿದ್ದಾರೆ.

‘ಯು’ ಆಕಾರದಲ್ಲಿ ಮಕ್ಕಳನ್ನು ಕೂಡಿಸುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಮುಖ್ಯವಾಗಿ ಶಿಕ್ಷಕರು ಚಲನಶೀಲರಾಗಿ ಪಾಠ ಮಾಡಲು ಹಾಗೂ ಮಕ್ಕಳು ಕೂಡಾ ಹೆಚ್ಚಿನ ಗಮನಕೊಟ್ಟು ಪಾಠ ಕಲಿಯಲು ಪ್ರೇರಣೆ ನೀಡುತ್ತದೆ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿ ಇದೇ ಮಾದರಿಯನ್ನು ಕಡ್ಡಾಯಗೊಳಿಸಿದರೆ ಒಳ್ಳೆಯ ಬೆಳವಣಿಗೆ ಎಂದು ಗ್ರಾಮದ ಉಪನ್ಯಾಸಕ ಶಂಕರ ಬಂಡಿಹಾಳ ಅಭಿಪ್ರಾಯಪಟ್ಟಿದ್ದಾರೆ.

‘ಭಿನ್ನತೆ ಇರಬಾರದು ಎಂಬ ಕಲ್ಪನೆ’

ನಮ್ಮೂರ ಶಾಲೆಯ 8 9 10ನೇ ತರಗತಿಗಳಲ್ಲಿ ಹೊಸ ‘ಯು’ ಆಕಾರದಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಮಾಡುತ್ತಿರುವುದು ಈಗ ತಾಲ್ಲೂಕಿನಲ್ಲಿ ಜನಪ್ರಿಯವಾಗಿದೆ. ಈ ಮಾದರಿಯು ಮಕ್ಕಳಿಗೆ ಹೆಚ್ಚು ಅನುಕೂಲವಾದರೆ ಸಾರ್ಥಕವಾಗುತ್ತದೆ ಬಸವರಾಜ ಪಟ್ಟೇದ ಗ್ರಾಮಸ್ಥ ಒಂದೇ ಸೂರಿನ ಅಡಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಭಿನ್ನತೆ ಇರಬಾರದು ಎಂಬ ಕಲ್ಪನೆ ಜತೆ ಮಕ್ಕಳ ಹತ್ತಿರದಲ್ಲಿದ್ದು ಪರಿಣಾಮಾಕಾರಿಯಾಗಿ ಪಾಠಮಾಡಲು ‘ಯು’ ವಿನ್ಯಾಸದಲ್ಲಿ ಸಾಧ್ಯವಾಗುವುದನ್ನು ಮನಗಂಡು ಅಳವಡಿಸಲಾಗಿದೆ ಪರಸಪ್ಪ ಸೊಬಗಿನ ಮುಖ್ಯಶಿಕ್ಷಕ ಸರ್ಕಾರಿ ಪ್ರೌಢಶಾಲೆ ಬಂಡಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.