ಮಂಗಳವಾರ, ಜನವರಿ 26, 2021
28 °C

ಗಡಚಿಂತಿ: ಉಚ್ಚಾಯ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಸಮೀಪದ ಗಡಚಿಂತಿ ಗ್ರಾಮದಲ್ಲಿ ಮಾರುತೇಶ್ವರ ಹಾಗೂ ಈಶ್ವರ ಜಾತ್ರೆ ಪ್ರಯುಕ್ತ ಭಾನುವಾರ ಸಂಜೆ ಉಚ್ಛಾಯ ಉತ್ಸವ ಅದ್ದೂರಿಯಾಗಿ ಜರುಗಿತು.

ದೇವಸ್ಥಾನದಲ್ಲಿ ರುದ್ರಾಭಿಷೇಕ, ಉತ್ಸವ ಮೂರ್ತಿ ಮೆರವಣಿಗೆ ಹಾಗೂ ಮಂಗಳಾರತಿ ಕಾರ್ಯಕ್ರಮ ನಡೆಯಿತು.

ರಂಗರಾವ್ ಗೌಡ್ರ ಮನೆಯಲ್ಲಿ ಕಳಸಕ್ಕೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮೆರವಣಿಗೆಯೊಂದಿಗೆ ಉಚ್ಚಾಯದ ಕಳಸ ತರಲಾಯಿತು.

ಹಾಬಲಕಟ್ಟಿ, ಮಾಲಗಿತ್ತಿ, ಹನುಮಸಾಗರ, ವಾರಿಕಲ್, ಹಿರೇಗೊಣ್ಣಾಗರ ಹಾಗೂ ಮಸರಕಲ್ ಗ್ರಾಮದ ಜನ ಸೇರಿದ್ದರು.

ಮುಖಂಡರಾದ ಎ.ಕೆ.ಪಾಟೀಲ, ಅನಂತರಾವ್ ಪಾಟೀಲ, ರಂಗರಾವ್ ಪಾಟೀಲ, ಹನುಮಪ್ಪ ರೋಣದ, ಯಮನಪ್ಪ, ಶರಣಪ್ಪ ಯರಗೇರಾ, ಹನುಮಪ್ಪ ವಾಲೀಕಾರ, ಪರಸಪ್ಪ, ವೆಂಕಟೆಶ ಕಬ್ಬರಗಿ, ಲಂಕೇಶ ಗುಡದೂರ, ಯಮನಪ್ಪ ದಳಪತಿ, ಬಾಲಪ್ಪ ನಾಗರಾಳ, ವೆಂಕಟೇಶ ಕಬ್ಬೇರ, ಹರೀಶಗೌಡ್ರ, ಲಂಕೇಶ, ಯಮನಪ್ಪ ಅಬ್ಬಿಗೇರಿ, ಬಾಲಪ್ಪ ನಾಗರಾಳ, ಯರಿಗೇರಿ ಹಾಗೂ ಮಹಾಂತೇಶ ಬೇಲೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.