ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ದರ್ಶನಕ್ಕೆ ಬಂದ ಭಕ್ತರಿಗೆ ಲಸಿಕೆ

Last Updated 12 ಸೆಪ್ಟೆಂಬರ್ 2021, 3:47 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ಸಿಂಪಿ ಲಿಂಗಣ್ಣ ರಸ್ತೆಯ ಶ್ರೀ ಗಜಾನನ ಗೆಳೆಯರ ಬಳಗದಿಂದ ಪ್ರತಿಷ್ಠಾಪನೆ ಮಾಡಿರುವ ಸಾರ್ವಜನಿಕ ಗಣೇಶನ ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್‌ ಲಸಿಕೆಯನ್ನು ಪೆಂಡಾಲ್‌ ಸ್ಥಳದಲ್ಲಿ ಆಯೋಜಕರು ವ್ಯವ್ಯಸ್ಥೆ ಮಾಡಿದ್ದು, ಜನರ ಗಮನ ಸಳೆಯಿತು.

ಹಬ್ಬದ ಸಂದರ್ಭದಲ್ಲಿ ಒಂದಿಲ್ಲೊಂದು ಸಾಮಾಜಿಕ ಕಾರ್ಯ ಹಮ್ಮಿಕೊಳ್ಳುತ್ತಾ ಬಂದಿರುವ ಈ ಮಂಡಳಿ ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಯನ್ನು ತೋರಿದೆ.ಜನರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಉಚಿತ ಲಸಿಕೆಹಾಕಲಾಯಿತು. ಸೆ.11ರಿಂದ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಬಂದ ಭಕ್ತರಿಗೆ ಲಸಿಕೆ ಹಾಕಲಾಯಿತು.

ಡಿಎಚ್‌ಒ ಡಾ.ಟಿ.ಲಿಂಗರಾಜು, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಾಮಾಂಜನೇಯ, ವೈದ್ಯಾಧಿಕಾರಿ ಡಾ.ಮಹೇಶ್, ಆರೋಗ್ಯ ಸಿಬ್ಬಂದಿ ಯಲ್ಲಪ್ಪ, ನೀಲಗಂಗಮ್ಮ ಹಾಗೂ ಅನಿತಾ ಶಿಬಿರದ ಯಶಸ್ವಿಗೆ ಶ್ರಮಿಸಿದರು.

ಶುಕ್ರವಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರು, ಗವಿಸಿದ್ದಪ್ಪ ಚಿನ್ನೂರು ಹಾಗೂ ನಗರಸಭೆ ಸದಸ್ಯ ಗುರು‌ ಹಲಗೇರಿ ನೇತೃತ್ವ ವಹಿಸಿದ್ದರು. ಮುಖಂಡರಾದ ಬಸವರಾಜ ನೀರಲಗಿ, ಪ್ರತಾಪ್, ಆನಂದ್ ವಿರಕ್ತಮಠ, ಶಿವು ನಾಲ್ವಾಡ್, ರಾಕೇಶ್, ಬಸವರಾಜ ಕರುಗಲ್, ಚಂದ್ರಶೇಖರಗೌಡ, ಬಸವ ರಾಜ ಹಕ್ಕಂಡಿ, ಜಗನ್ನಾಥಗೌಡ, ಬಸವರಾಜ‌ ಕೋರಿ, ಅಮರೇಶ್
ಕೋರಿ ಇದ್ದರು. ಲಸಿಕೆ ಪಡೆ ಯಲು ಆಧಾರ್ ನೀಡಬೇಕು ಎಂದು ಮಂಡಳಿ
ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT