ಶುಕ್ರವಾರ, ಜನವರಿ 17, 2020
22 °C

ವಾಲ್ಮೀಕಿ ರಾಮಾಯಣ ಶ್ರೇಷ್ಠ ಗ್ರಂಥ :ಚಂದಪ್ಪ ತಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ವಿಶ್ವಕ್ಕೆ ಶ್ರೇಷ್ಠವಾದದ್ದು ಎಂದು ಮುಖಂಡ ಚಂದಪ್ಪ ತಳವಾರ ಹೇಳಿದರು.

ಸಮೀಪದ ಯರಗೇರಾ ಗ್ರಾಮದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಣ ರಚಿಸುವ ಮೂಲಕ ವಾಲ್ಮೀಕಿ ವಿಶ್ವಕ್ಕೆ ಸಂಸ್ಕೃತಿಯನ್ನು ಕಲಿಸಿಕೊಟ್ಟಿದ್ದಾರೆ. ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲರೂ ವಾಲ್ಮೀಕಿಯ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜ ಮುಂದೆ ಬರಲು ಎಲ್ಲರೂ ಶಿಕ್ಷಣವಂತರಾಗಬೇಕು ಎಂದರು.

ಗ್ರಾಪಂ ಅಧ್ಯಕ್ಷ ದೇವಪ್ಪ ಹನುಮಸಾಗರ, ಮುಖಂಡರಾದ ಶರಣಯ್ಯ ಹಿರೇಮಠ, ಶಿವಪ್ಪ ತಳಗಡೆ, ಮುತ್ತಪ್ಪ ತಳವಾರ, ಧರ್ಮಣ್ಣಾ ಗಡಾದ, ವೆಂಕಟಪತಿ ಈಳಗೇರ, ಈರಣ್ಣ ಸೂಡಿ, ಬಸವರಾಜ ಶೆಟ್ಟರ್‌ ಹಾಗೂ ವಿ.ಬಿ.ಗೌಡರ
ಇದ್ದರು.

ಪ್ರತಿಕ್ರಿಯಿಸಿ (+)