ಬುಧವಾರ, ಆಗಸ್ಟ್ 10, 2022
23 °C

ಬೆಳಗಟ್ಟಿ: ನೀರಿನ ಘಟಕ ದುರಸ್ತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಟ್ಟಿ (ಅಳವಂಡಿ): ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಜನ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮರ್ಪಕ ನಿರ್ವಹಣೆ ಇಲ್ಲದೆ ಕಳೆದ ಹಲವು ತಿಂಗಳಿನಿಂದ ಘಟಕ ಸ್ಥಗಿತಗೊಂಡಿದೆ. ಜನ ನೀರಿಗಾಗಿ ಕೊಳವೆಬಾವಿಯನ್ನು ಅವಲಂಬಿಸಿದ್ದಾರೆ. ಆ ನೀರು ಸರಿಯಾಗಿಲ್ಲ. ರೋಗ ಭೀತಿ ಎದುರಾಗಿದೆ.

‘ನೀರು ಪೂರೈಸುವ ಮೂಲಕ ಜನರ ದಾಹ ನೀಗಿಸಬೇಕಾದ ನೀರಿನ ಘಟಕಗಳು ಅಧಿಕಾರಗಳ, ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷಕ್ಕೆ ಬಲಿಯಾಗಿದೆ’ ಎಂದು ಗ್ರಾಮಸ್ಥರು ದೂರಿದರು.

ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಇತ್ತ ಕಡೆ ಗಮನಹರಿಸಿ ಕೂಡಲೇ ನೀರಿನ ಘಟಕ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರಾದ ಶಂಕರಗೌಡ ಪಾಟೀಲ, ಕಾಸಿಂ ಸಾಬ, ದೇವೆಂದ್ರಪ್ಪ , ಶಿವನಗೌಡ ಪಾಟೀಲ, ಇಮಾಮಸಾಬ, ಶಫೀಸಾಬ ದರ್ಗಾದ ಹಾಗೂ ಮುಸ್ತಾಫ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು