ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾಭ್ಯಾಸದಿಂದ ಚೈತನ್ಯ: ಪತಂಜಲಿ ಯೋಗ ಸಮಿತಿ ಮುಖ್ಯ ಪ್ರಭಾರ ಸಂಗಣ್ಣ ತೆಂಗಿನಕಾಯಿ

Last Updated 22 ಜೂನ್ 2021, 2:51 IST
ಅಕ್ಷರ ಗಾತ್ರ

ಯಲಬುರ್ಗಾ: ‘ಮಾನಸಿಕ ನೆಮ್ಮದಿ ಹಾಗೂ ದೇಹದಲ್ಲಿ ನಿತ್ಯ ಚೈತನ್ಯ ತುಂಬುವ ಶಕ್ತಿ ಯೋಗದಲ್ಲಿದ್ದು, ನಿಯಮಿತವಾಗಿ ಯೋಗಾಭ್ಯಾಸದಲ್ಲಿ ತೊಡಗಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ’ ಎಂದು ಪತಂಜಲಿ ಯೋಗ ಸಮಿತಿಯ ಮುಖ್ಯ ಪ್ರಭಾರ ಸಂಗಣ್ಣ ತೆಂಗಿನಕಾಯಿ ಹೇಳಿದರು.

ಪಟ್ಟಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಡೆದ ಯೋಗ ಶಿಬಿರ ಹಾಗೂ ಅಂಗವಿಕಲಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ಸಮಿತಿಯಿಂದ ಸುಮಾರು ವರ್ಷಗಳಿಂದಲೂ ಉಚಿತ ಯೋಗ ಶಿಬಿರ ಆಯೋಜಿಸಲಾಗುತ್ತಿದೆ. ಸಾಕಷ್ಟು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಯೋಗ, ಆಧ್ಯಾತ್ಮಿಕ ಚಿಂತನೆ ಮತ್ತು ಆಹಾರ ಸೇವನೆ ಕ್ರಮ ಇನ್ನಿತರ ಅಂಶಗಳ ಕುರಿತು ತಿಳಿಸಲಾಗುತ್ತದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ,‘ಯೋಗ ಋಷಿಮುನಿಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಇತ್ತೀಚೆಗೆ ಈ ಯೋಗಕ್ಕೆ ಅಂತರರಾಷ್ಟ್ರೀಯ ಮಟ್ಟದ ಸ್ಥಾನಮಾನ ದೊರೆತಿದೆ. ಯೋಗದಿಂದ ಉತ್ತಮ ಆರೋಗ್ಯದಿಂದ ಇರಲು ಸಾಧ್ಯವಾಗುವುದರಿಂದ ಎಲ್ಲರು ಯೋಗವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಖಂಡ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು.

ಶಿಕ್ಷಕ ದೇವಪ್ಪ ವಾಲ್ಮೀಕಿ ಸ್ವಾಗತಿಸಿ, ನಿರೂಪಿಸಿದರು. ಸ್ಥಳೀಯ ಅಂಗವಿಕಲರಿಗೆ ಮತ್ತು ಪತ್ರಕರ್ತರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು.

ಗಣ್ಯರಾದ ಡಾ. ಶರಣಪ್ಪ ಕೊಪ್ಪಳ, ಪಟ್ಟಣ ಪಂಚಾಯಿತಿ ಸದಸ್ಯರಾದ ರೇವಣಪ್ಪ ಹಿರೇಕುರುಬರ, ಡಾ.ನಂದಿತಾ ದಾನರಡ್ಡಿ, ಇನ್ನರ್‍ವೀಲ್ ಕ್ಲಬ್‍ನ ಅಧ್ಯಕ್ಷೆ ಜ್ಯೋತಿ ಪಲ್ಲೇದ, ಶರಣಪ್ಪ ಗಾಂಜಿ, ಸುಧೀರ ಕೊರ್ಲಳ್ಳಿ, ಮಲ್ಲಿಕಾರ್ಜುನ ಜಕ್ಕಲಿ, ರಮೇಶ ಬೇಲೇರಿ, ಅಶೋಕ ಪಾಟೀಲ, ಬಸವರಾಜ ಕೊಂಡಗುರಿ, ಬಸವರಾಜ ಹಳ್ಳಿ, ಎನ್.ಎಂ. ಜನಾದ್ರಿ, ಡಾ. ಶಿವನಗೌಡ ದಾನರಡ್ಡಿ ಹಾಗೂ ಮಲ್ಲಣ್ಣ ತೆಂಗಿನಕಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT