ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ: ದೊಡ್ಡಬಸಪ್ಪ

Published 3 ಮೇ 2024, 15:30 IST
Last Updated 3 ಮೇ 2024, 15:30 IST
ಅಕ್ಷರ ಗಾತ್ರ

ಕನಕಗಿರಿ: ಯುವ ಕಾಂಗ್ರೆಸ್ ಘಟಕದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡಬಸಪ್ಪ ಭತ್ತದ ಅವರು ಕಾಂಗ್ರೆಸ್ ತೊರೆದು ಈಚೆಗೆ ಮಾಜಿ‌ ಶಾಸಕ ಬಸವರಾಜ ದಢೇಸೂಗೂರು ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ದೊಡ್ಡಬಸಪ್ಪ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹಗಲಿರುಳು‌ ಶ್ರಮ ವಹಿಸಿದರೂ ಪಕ್ಷದಲ್ಲಿ ತಮ್ಮನ್ನು ‌ನಿರ್ಲಕ್ಷ್ಯ ಮಾಡಲಾಯಿತು. ಸ್ವಾಭಿಮಾನಕ್ಕೆ ದಕ್ಕೆ ಬಂದ‌ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇನೆ’ ಎಂದು ತಿಳಿಸಿದರು.

ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರು ಪಕ್ಷದ ಶಾಲು ಹಾಕುವ ಮೂಲಕ ಭತ್ತದ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಬಿಜೆಪಿ ಮಂಡಲ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ, ನಿಕಟ ಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್, ಜಿಲ್ಲಾ ಉಪಾಧ್ಯಕ್ಷ ವಾಗೀಶ ಹಿರೇಮಠ, ಪ್ರಮುಖರಾದ ರವಿ‌ ಭಜಂತ್ರಿ, ರಂಗಪ್ಪ ಕೊರಗಟಗಿ, ನಿಂಗಪ್ಪ ಪೂಜಾರ, ಹರೀಶ‌ ಪೂಜಾರ ಇತರರು ಇದ್ದರು.

ಪರಣ್ಣ ಮುನವಳ್ಳಿ ಪ್ರಚಾರ: ಗಂಗಾವತಿಯ ಮಾಜಿ ಶಾಸಕ‌ ಪರಣ್ಣ‌ ಮುನವಳ್ಳಿ ಅವರು ಬಣಜಿಗ ಸಮಾಜದ‌ವರನ್ನು ಶುಕ್ರವಾರ ಭೇಟಿಯಾಗಿ ಮತಯಾಚನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ‌ ಈ ದೇಶದ ಪ್ರಧಾ‌ನಮಂತ್ರಿಯಾಗಲು ಪ್ರತಿಯೊಬ್ಬರು ಬಿಜೆಪಿಯನ್ನು ಬೆಂಬಲಿಸಬೇಕೆಂದು‌ ಕೋರಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸುರೇಶ ಗುಗ್ಗಳಶೆಟ್ರ, ಬಿಜೆಪಿ ಮಂಡಲ‌ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಪ್ರಮುಖರಾದ ರುದ್ರಮುನಿಯಪ್ಪ ಪ್ರಭುಶೆಟ್ಟರ್, ವಿರೂಪಾಕ್ಷಪ್ಪ ಭತ್ತದ, ಬಸವರಾಜ ಗುಗ್ಗಳಶೆಟ್ರ, ದೊಡ್ಡಬಸಪ್ಪ ಭತ್ತದ, ಬಸವರಾಜ ಕಲಕೇರಿ, ಶಿವಕುಮಾರ‌ ಕೋರಿಶೆಟ್ರ, ಶ್ರೀಶೈಲ ಪಾಟೀಲ, ಚಂದ್ರಶೇಖರ ಹಾದಿಮನಿ ಸೇರಿದಂತೆ‌ ಮುಖಂಡರು ಹಾಜರಿದ್ದರು.

ಕ‌ನಕಗಿರಿಯ ಕಾಂಗ್ರೆಸ್ ಮುಖಂಡ ದೊಡ್ಡಬಸಪ್ಪ ಭತ್ತದ ಅವರು ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರ ಸಮ್ಮುಖದಲ್ಲಿ ಬುಧವಾರ ಬಿಜೆಪಿ ಸೇರ್ಪಡೆಯಾದರು
ಕ‌ನಕಗಿರಿಯ ಕಾಂಗ್ರೆಸ್ ಮುಖಂಡ ದೊಡ್ಡಬಸಪ್ಪ ಭತ್ತದ ಅವರು ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರ ಸಮ್ಮುಖದಲ್ಲಿ ಬುಧವಾರ ಬಿಜೆಪಿ ಸೇರ್ಪಡೆಯಾದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT