ಗಂಗಾವತಿ: ಶಾಲಾ ಮಕ್ಕಳನ್ನು ಹತ್ತಿಸಿಕೊಂಡು ಹೋಗುವಾಗ ಒಂದು ಆಟೋದಲ್ಲಿ ಹತ್ತು ಮಕ್ಕಳಿಗಿಂತ ಹೆಚ್ಚಿಗೆ ಕಂಡು ಬಂದರೆ ಅಂತಹ ಆಟೋ ವಾಹನ ಮತ್ತು ಚಾಲಕರ ವಿರುದ್ಧ ಕ್ರಮ ಕೈಗೊಂಡು ದಂಡ ಹಾಕಲಾಗುವುದು ಎಂದು ನಗರಠಾಣೆಯ ಪಿಐ ಜೆ.ಆರ್. ನಿಕ್ಕಂ ಎಚ್ಚರಿಸಿದರು.

ನಗರದ ಸಂಚಾರಿ ಠಾಣೆಯಲ್ಲಿ ಗುರುವಾರ ಖಾಸಗಿ ಶಾಲೆಯ ಮುಖ್ಯಸ್ಥರು ಹಾಗೂ ಆಟೋ ಚಾಲಕರ ಸಭೆ ಕರೆದು, ಶಾಲಾ ಮಕ್ಕಳನ್ನು ವಾಹನದಲ್ಲಿ ಸಾಗಿಸುವಾಗ ವಹಿಸಬೇಕಾದ ಮುಂಜಾಗ್ರತೆಯ ಬಗ್ಗೆ ಪಿಐ ನಿಕ್ಕಂ ಮಾತನಾಡಿದರು. ಮಕ್ಕಳನ್ನು ಕುರಿಗಳಂತೆ ವಾಹನದಲ್ಲಿ ತುಂಬಿದರೆ ಆಗದು. ಕಾಯ್ದೆ, ಕಾನೂನು ಬಲೀಷ್ಠವಾಗುತ್ತಿವೆ. ಚಾಲಕರು ಹಾಗೂ ಖಾಸಗಿ ಶಾಲೆಯ ಆಡಳಿತ ಮಂಡಳಿ ಬದಲಾದ ಕಾನೂನಿಗೆ ಹೊಂದಿಕೊಂಡು ಹೋಗಬೇಕು ಎಂದರು.

ಪ್ರತಿಯೊಬ್ಬ ಆಟೋ ಚಾಲಕರು, ವಾಹನ ಚಾಲನೆ ಸಂದರ್ಭದಲ್ಲಿ ಸಮವಸ್ತ್ರ ಕಡ್ಡಾಯ. ಆಟೋಗಳಿಗೆ ಪರವಾನಗಿ, ವಾಹನದ ದಾಖಲೆ ಸರಿಯಾಗಿಟ್ಟಿರಬೇಕು, 15 ವರ್ಷ ಮೀರಿದ ಆಟೋ ಬಳಸುವಂತಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಕೆಲ ಆಟೋ ಚಾಲಕರು ಮಾತನಾಡಿ, ಶಾಲೆಯ ವಾಹನಗಳಿಗೆ ಪಾಲಕರು ವರ್ಷದ 12 ತಿಂಗಳು ಶುಲ್ಕ ಪಾವತಿಸುತ್ತಾರೆ. ಆದರೆ ಆಟೋಗಳಿಗೆ ಮಾತ್ರ ಕೇವಲ ಒಂಭತ್ತು ತಿಂಗಳು ಹಣ ನೀಡುತ್ತಾರೆ.

ಕೇವಲ ಹತ್ತು ಮಕ್ಕಳನ್ನು ಮಾತ್ರ ಆಟೋಗಳಲ್ಲಿ ಸಾಗಿಸಿದರೆ ಇಂಧನ ಏರಿಕೆಯ ಈ ದಿನಗಳಲ್ಲಿ ಜೀವನ ಕಷ್ಟ ಎಂದರು. ನಿಕ್ಕಂ ಮಾತನಾಡಿ, ಬೇಕಿದ್ದರೆ ಪಾಲಕರಿಂದ ಹೆಚ್ಚುವರಿ ಶುಲ್ಕ ಪಡೆಯಿರಿ. ಮಕ್ಕಳನ್ನು ಹೆಚ್ಚಿಗೆ ಹತ್ತಿಸಬೇಡಿ ಎಂದು ಸಲಹೆ ನೀಡಿದರು.
ವಿವಿಧ ಖಾಸಗಿ ಶಾಲೆಯ ಮುಖ್ಯಸ್ಥರಾದ, ಇಬ್ರಾಹಿಂ, ಭೋಗೇಶ ದೇಶಪಾಂಡೆ, ಹೇಮಾ ಸುಧಾಕರ, ಆಲಂಪಲ್ಲಿ ಜಗನ್ನಾಥ, ಅಜಮೀರ ನಂದಾಪುರ, ಜೈಭೀಮ್, ಜಯ ಕರ್ನಾಟಕ, ಸಿಐಟಿಯು ಆಟೋ ಸಂಘದ ಮುಖಂಡರಾದ ಧರ್ಮಯ್ಯ, ಮಹೇಂದ್ರಸಿಂಗ್, ರಾಮಣ್ಣ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.