ಬೆಳಗಾವಿ ಅಧಿವೇಶನದ ಅವಧಿಗೆ ಈಶ್ವರಪ್ಪ ಆಕ್ಷೇಪ

7

ಬೆಳಗಾವಿ ಅಧಿವೇಶನದ ಅವಧಿಗೆ ಈಶ್ವರಪ್ಪ ಆಕ್ಷೇಪ

Published:
Updated:

ಶಿವಮೊಗ್ಗ: ಬೆಳಗಾವಿ ಅಧಿವೇಶನಕ್ಕೆ ನಿಗದಿ ಮಾಡಿರುವ ಅವಧಿ ಅತ್ಯಂತ ಕಡಿಮೆ. ಇಷ್ಟು ಕಡಿಮೆ ಅವಧಿಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಸಾಧ್ಯವಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದರು.

ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಬೀಕರ ಬರಗಾಲ ರಾಜ್ಯವನ್ನು ಆವರಿಸಿದೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ. ಮಂತ್ರಿಗಳು ಹಳ್ಳಿಗಳತ್ತ ಮುಖ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿವೇಶನವನ್ನೂ ಸುದೀರ್ಘವಾಗಿ ನಡೆಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ವಿದೇಶಕ್ಕೆ ಹೊರಟಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಅಧಿವೇಶನದ ಗಂಭೀರತೆ ಅರ್ಥವಾಗಿಲ್ಲ. ಜೆಡಿಎಸ್, ಕಾಂಗ್ರೆಸ್ ಶಾಸಕರು ಅವರನ್ನೇ ಅನುಸರಿಸಿದರೆ ಅಧಿವೇಶನ ನಡೆದಂತೆ ಎಂದು ವ್ಯಂಗ್ಯವಾಡಿದರು.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಒಂದಷ್ಟು ರೈತರಿಗೆ ಋಣಭಾರ ತೀರುವಳಿ ಪತ್ರ ನೀಡುವ ನಾಟಕವಾಡುತ್ತಿದ್ದಾರೆ. ಜನರಿಗೆ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸದ ಸರ್ಕಾರ ಲೂಟಿಗೆ ನಿಂತಿದೆ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !