ಸೋಮವಾರ, ಏಪ್ರಿಲ್ 12, 2021
31 °C

ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ (ಮಂಡ್ಯ ಜಿಲ್ಲೆ): ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಹಾಗೂ ಮತ್ತೊಬ್ಬ ಬಾಲಕ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ತಾಲ್ಲೂಕಿನ ಬಳೇಹತ್ತಿಗುಪ್ಪೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮಹದೇವಪ್ಪ–ಭಾರತಿ ದಂಪತಿಯ ಪುತ್ರರಾದ ಕಾರ್ತಿಕ್‌ (10), ಚಂದನ್‌ (11) ಹಾಗೂ ಮಲ್ಲಿಕಾರ್ಜುನ್‌–ಸುಮಾ ದಂಪತಿಯ ಪುತ್ರ ರಿತೇಶ್‌ (8) ಮೃತಪಟ್ಟವರು. ಕಾರ್ತಿಕ್‌ ಹಾಗೂ ಚಂದನ್‌ ಪಾಂಡವಪುರದ ನಿರ್ಮಲಾ ಕಾನ್ವೆಂಟ್‌ ವಿದ್ಯಾರ್ಥಿಗಳಿದ್ದು ಕ್ರಮವಾಗಿ 5, 6ನೇ ತರಗತಿಯಲ್ಲಿ ಓದುತ್ತಿದ್ದರು. ರಿತೇಶ್‌ ಬಳೇಹತ್ತಿಗುಪ್ಪೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ.

ಶಾಲೆಗೆ ರಜೆ ಇರುವ ಕಾರಣ ಬಾಲಕರು ಗ್ರಾಮದ ಹೊರಹೊಲಯದಲ್ಲಿರುವ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದರು. ಹೊಂಡದಲ್ಲಿ ತುಂಬಿದ್ದ ಕೆಸರಿನಲ್ಲಿ ಸಿಲುಕಿ ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು