ಕೆ.ಆರ್.ಪೇಟೆ: ‘ನಹೀ ಜ್ಞಾನೇನ ಸದೃಶಂ’ ಎಂಬ ಉಪನಿಷತ್ತಿನ ಮಾತು ಜ್ಞಾನ, ವಿದ್ಯೆ ಎಂಬುದು ಸಾಗರಕ್ಕಿಂತಲೂ ಮಿಗಿಲಾದುದು ಎಂದು ಹೇಳುತ್ತದೆ. ಅಂತಹ ಜ್ಞಾನವನ್ನು ಕೊಡುವಂತಹವು ಪುಸ್ತಕಗಳು. ಹಾಗಾಗಿ ಪ್ರತಿಯೊಂದು ಮನೆ, ಶಾಲೆ, ಕಾಲೇಜುಗಳಲ್ಲಿ ಪುಸ್ತಕಗಳ ಭಂಡಾರವಾದ ಗ್ರಂಥಾಲಯ ಇರಬೇಕೆಂದು ಹಿರಿಯರು ಹೇಳುತ್ತಾರೆ. ಹಾಗಾಗಿಯೇ ದೇಶ ಸುತ್ತೊದಕ್ಕಿಂತ ಕೋಶ ಓದೋದು ಮೇಲು ಎಂಬ ಮಾತು ಇದೆ.

ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯುತ್ತಮ ಮಾದರಿಯಲ್ಲಿ ಗ್ರಂಥಾಲಯವನ್ನು ರೂಪಿಸಲಾಗಿದೆ.

ಇಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎಂ, ಬಿ.ಬಿ.ಕ್ಯು, ಪತ್ರಿಕೋದ್ಯಮ ಸೇರಿದಂತೆ ಸ್ನಾತಕ, ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 845 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಅವರ ಓದಿನ ಹಿತಾಸಕ್ತಿಗಳಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗುವ ಸಾವಿರಾರು ಪುಸ್ತಕಗಳ ರಾಶಿ ಇಲ್ಲಿದೆ. ಸಾಹಿತ್ಯ ಅಭಿರುಚಿ ಹುಟ್ಟುಸುವ ಪುಸ್ತಕ, ದಿನನಿತ್ಯದ ಪ್ರಚಲಿತ ಘಟನೆಗಳನ್ನು ತಿಳಿದುಕೊಳ್ಳಲು 18 ದಿನ ಪತ್ರಿಕೆಗಳು, ನಾನಾ ತರಹದ ಟೈಟಲ್ನ 15,125 ಪುಸ್ತಕಗಳು ಇಲ್ಲಿದ್ದು, ಒಟ್ಡು 45,692 ಪುಸ್ತಕಗಳು ಇಲ್ಲಿರುವದು ಗ್ರಂಥಾಲಯದ ಮಹತ್ವ ಹೆಚ್ಚಿಸಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯವನ್ನು ವಿಶಾಲವಾದ ಕಟ್ಟಡದಲ್ಲಿ ರೂಪಿಸಲಾಗಿದೆ. ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಸಾಮಾಜಿಕ ಧಾರ್ಮಿಕ ಮತ್ತು ಸ್ಪರ್ಧಾತ್ಮಕ ವಿಚಾರಗಳನ್ನು ಒಳಗೊಂಡ ಪುಸ್ತಕಗಳಿದ್ದು, ಪ್ರತ್ಯೇಕವಾಗಿ ಪುಸ್ತಕಗಳನ್ನು ಜೋಡಿಸಿಡಲಾಗಿದೆ.

ಕಾಲೇಜಿನ ಪ್ರಾಂಶುಪಾಲ ವಿ.ಕೆ.ಜಗದೀಶ್, ಪತ್ರಾಂಕಿತ ಅಧಿಕಾರಿ ಬಿ.ಎ. ಮಂಜುನಾಥ್, ಗ್ರಂಥಾಲಯದ ಮುಖ್ಯಸ್ಥ ಎಂ.ಪಿ. ಅರುಣ್ ಕುಮಾರ್ ಅವರ ಶ್ರಮದ ಫಲವಾಗಿ ಸುವ್ಯವಸ್ಥಿತ, ಸುಸಜ್ಜಿತ ಕಟ್ಟೆದಲ್ಲಿ ಗ್ರಂಥಾಲಯದಲ್ಲಿ ಮೈದೆಳೆದಿದ್ದು ಮಂಡ್ಯ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜಿನಲ್ಲಿ ಸುಸಜ್ಜಿತ ಗ್ರಂಥಾಲಯ, ಅತೀ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ಕಾಲೇಜು ಎಂಬ ಹೆಸರಿಗೆ ಪಾತ್ರವಾಗಿದೆ.

ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಶೋಭಾ ಅವರ ಕಳೆದ ವಾರ ಭೇಟಿ ನೀಡಿ ಈ ಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಇದರ ಹಿರಿಮೆ ಹೆಚ್ಚಿಸಿದೆ.

‘1988-89ರಲ್ಲಿ ಈ ಕಾಲೇಜು ಸ್ಥಾಪನೆಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯಲ್ಲಿದ್ದು ಅವರ ಬೆಳವಣಿಗೆಗೆ ಇಲ್ಲಿನ ಗ್ರಂಥಾಲಯದ ಪುಸ್ತಕಗಳು, ದಿನಪತ್ರಿಕೆ, ಮಾಗಜೈನ್ಗಳು ಸಹಕಾರಿಯಾಗಿವೆ’ ಎನ್ನುತ್ತಾರೆ ಪ್ರಾಂಶುಪಾಲರು.

ಗ್ರಂಥಾಲಯದಲ್ಲಿ ಒಟ್ಟು 45,692 ಪುಸ್ತಕಗಳಿದ್ದು, ಪ್ರತಿನಿತ್ಯ ಕನ್ನಡ, ಇಂಗ್ಲಿಷ್ ಸೇರಿದಂತೆ 18 ದಿನಪತ್ರಿಕೆಗಳನ್ನು ತರಿಸಲಾಗುತ್ತದೆ. 38 ವಿವಿಧ ಬಗೆಯ ವಾರ, ಪಾಕ್ಷಿಕ ,ಮಾಸಿಕ ಪತ್ರಿಕೆಗಳು ಗ್ರಂಥಾಲಯಕ್ಕೆ ಬರುತ್ತವೆ. ಗ್ರಂಥಾಲಯದಲ್ಲಿ 3,13,500 ಇ-ಪುಸ್ತಕಗಳಿವೆ. 6000 ಇ– ಜರ್ನಲ್ಗಳಿವೆ. 4,527 ಪರಾಮರ್ಶನ ಪುಸ್ತಕಗಳಿದ್ದು, ಕುಳಿತು ಓದಲು ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಗ್ರಂಥಪಾಲಕ ಅರುಣ್ ಕುಮಾರ್.

‘ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ದಿವ್ಯ ವಾಣಿಯಂತೆ ಈ ಗ್ರಂಥಾಲಯ ರೂಪುಗೊಂಡಿದ್ದು, ವಿದ್ಯಾರ್ಥಿಗಳ ಪಾಲಿಗಂತೂ ಜ್ಞಾನ ವಿಜ್ಞಾನದ ಆಗರವೇ ಆಗಿದೆ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.