ನಾಗಮಂಗಲ: ‘ಪ್ರತಿಯೊಬ್ಬರಿಗೂ ಒಳಿತು ಬಯಸುವುದೇ ನಿಜವಾದ ಧರ್ಮ. ಪ್ರತಿ ಧರ್ಮದವರು ಅವರವರ ಧರ್ಮವನ್ನು ಪಾಲಿಸಿದಾಗ ಶಾಂತಿ ಸಾಧ್ಯ. ಸಮಸ್ಯೆ ಇರುವುದು ಧರ್ಮದಲ್ಲಲ್ಲ. ಧರ್ಮದ ಹೆಸರಿನಲ್ಲಿ ಜಗಳ ಮಾಡಲು ಬಯಸುವವರು ಧರ್ಮ ಹೇಳಿದ ಹಾಗೆ ನಡೆಯುತ್ತಿಲ್ಲ. ಹೀಗಾಗಿ ಧರ್ಮಗಳ ನಡುವೆ ಜಗಳ ನಡೆಯುತ್ತಿದೆ’ ಎಂದು ಮಂಗಳೂರಿನ ರಾಜ್ಯ ಸುನ್ನಿ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಮಾತನಾಡಿದರು.

ಆದಿಚುಂಚನಗಿರಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಗವಿಪುರದ ಗೋಸಾಯಿ ಮಠದ ಪೀಠಾಧ್ಯಕ್ಷ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸೋಮವಾರ ನಡೆದ ‘ಸರ್ವಧರ್ಮ ಸಮ್ಮೇಳನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮ ನಿಜ ಅರ್ಥದಲ್ಲಿ ಪಾಲನೆಯಾದಾಗ ಮಾತ್ರ ಅಪಾಯ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಎಲ್ಲರನ್ನೂ ಪ್ರೀತಿಸುವುದು ಅತ್ಯಂತ ಶ್ರೇಷ್ಠ ಧರ್ಮ. ದೇವರಲ್ಲಿ ಭಕ್ತಿ, ಜನರಲ್ಲಿ ಪ್ರೀತಿ ಇದುವೇ ನಿಜವಾದ ಧರ್ಮ. ಸರ್ವರಲ್ಲೂ ಸಹಿಷ್ಣುತೆ ಬೇಕು’ ಎಂದು ಪ್ರತಿಪಾದಿಸಿದರು.

‘ಬ್ರಿಟಿಷರ ಕಾಲದಿಂದ ಹಿಂದೂ– ಮುಸ್ಲಿಮರನ್ನು ಒಡೆದು ಆಳಲಾಗುತ್ತಿದೆ. ಅದರ ಮುಂದುವರಿದ ಭಾಗದಂತೆ ರಾಜಕೀಯ ದುಷ್ಟಶಕ್ತಿಗಳು ರಾಜಕೀಯ ಲಾಭಕ್ಕೆ ಧರ್ಮಗಳ ನಡುವೆ ವಿಷ ಬಿತ್ತಿ ಜನಸಾಮಾನ್ಯರನ್ನು ಅಶಾಂತಿಯೆಡೆಗೆ ದೂಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನ ಮತ್ತು ಕೊಡಗು ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶಂಭೂನಾಥ ಸ್ವಾಮೀಜಿ ಮಾತನಾಡಿ, ‘ಶ್ರೀಮಠ ಸರ್ವಧರ್ಮ ಸಮ್ಮೇಳನ ನಡೆಸಿ, ಭಾವೈಕ್ಯದ ಸಂದೇಶ ಸಾರುತ್ತಿದೆ. ಪರೋಪಕಾರಕ್ಕಾಗಿ ಈ ದೇಹ ಮೀಸಲಿರಿಸಬೇಕು. ಹಿಂದೂ ಧರ್ಮದಲ್ಲಿ ಹುಟ್ಟಿದ್ದೇವೆ. ಕೂಡಿ ಬಾಳಲು ಕಲಿಸದೇ ಇದ್ದರೆ ಅದು ಧರ್ಮವಲ್ಲ. ಅಭಾವ ಉಳ್ಳವರಾಗಿದ್ದೇವೆ. ಭಾವನೆ ಉಳ್ಳವರಾಗಬೇಕು’ ಎಂದರು.

ಚಿಕ್ಕಮಗಳೂರಿನ ಸಂತ ಅಂಡ್ರಸ್ ಚರ್ಚ್ ಸಭಾಪಾಲಕ ರೆವರೆಂಡ್ ಜಾರ್ಜ್ ವಿನೋದ್ ಕುಮಾರ್ ಮಾತನಾಡಿ, ‘ಧರ್ಮ ಅರ್ಥವಾದಾಗ ಆಚರಣೆಗೆ ಯೋಗ್ಯ. ಇಲ್ಲವಾದರೆ ಅದು ಮೌಢ್ಯದ ಆಚರಣೆಯಂತೆ ಭಾಸವಾಗುತ್ತದೆ’ ಎಂದರು.

ಹುಂಚ ಶ್ರೀಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ‘ಇಂದಿನ ಜಗತ್ತಿನ ಸನ್ನಿವೇಶ ಭಯದ ಸ್ವರೂಪದಲ್ಲಿದೆ. ಸಮಾಧಾನದ ಅಂಶವೆಂದರೆ ನಾವು ಭಾರತದಲ್ಲಿದ್ದೇವೆ. ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲ ಧರ್ಮದ ಜನರಿದ್ದಾರೆ. ನಾವೆಲ್ಲರೂ ಮನುಷ್ಯರೂ ಎಂಬುದನ್ನು ಅರಿಯಬೇಕಿದೆ’ ಎಂದರು.

ಬೆಂಗಳೂರು ಗಾಂಧಿ ನಗರದ ಮಹಾಬೋಧಿ ಸೊಸೈಟಿಯ ಭಿಕ್ಖು ನ್ಯಾನಾನಂದರು ಮಾತನಾಡಿ, ‘ಇಂದು ಭಗವಾನ್ ಬುದ್ಧರನ್ನು ಮರೆತಿದ್ದೇವೆ. ಬುದ್ಧ ಎಂದರೆ ಜ್ಞಾನ, ಸತ್ಯ, ದಯೆ, ಕರುಣೆ, ಮೈತ್ರಿಯ ಭಾವನೆ. ದಯವೇ ಧರ್ಮದ ಮೂಲ’ ಎಂದು ಪ್ರತಿಪಾದಿಸಿದರು.

ತಾಲ್ಲೂಕಿನ ಶ್ರೀಕ್ಷೇತ್ರ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಸೊಮವಾರ ಬೆಳಿಗ್ಗೆಯಿಂದ ಕ್ಷೇತ್ರಾಧಿದೇವತೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿದವು.

ತೆಪ್ಪೋತ್ಸವದ ಸಂಭ್ರಮ

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದ ಪುಷ್ಕರಣಿಯಲ್ಲಿ ಕಾಲಭೈರವೇಶ್ವರಸ್ವಾಮಿ ತಿರುಗಣಿ ಉತ್ಸವ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರ ತೆಪ್ಪೋತ್ಸವ ಸೋಮವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.