ಮಂಗಳವಾರ, ಜನವರಿ 26, 2021
28 °C

ವಕೀಲ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮದ್ದೂರು ತಾಲ್ಲೂಕು ನವಿಲೆ ಗ್ರಾಮದ ವಕೀಲ, ಬಿಎಸ್‌ಪಿ ಮುಖಂಡ ಎನ್‌.ಕೆ.ರವೀಂದ್ರ ಶನಿವಾರ ಸಂಜೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಶಿಂಷಾ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಪಿಲ್ಲರ್‌ ಕೆಳಗಿನ ಗುಂಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಬಹಳ ಕಿರಿದಾದ ಜಾಗದಲ್ಲಿ ಮೃತದೇಹ ಇರುವ ಕಾರಣ ರಾತ್ರಿಯಾದರೂ ಶವ ಮೇಲೆತ್ತಲು ಸಾಧ್ಯವಾಗಿರಲಿಲ್ಲ.

ನದಿ ತಟದಲ್ಲೇ ಇರುವ ಜಮೀನಿಗೆ ಅವರು ಮಧ್ಯಾಹ್ನ ತೆರಳಿದ್ದರು. ಸೇತುವೆ ಸಮೀಪದಲ್ಲೇ ಅವರ ಪಲ್ಸರ್‌ ಬೈಕ್‌, ಚಪ್ಪಲಿ ಪತ್ತೆಯಾಗಿವೆ. ರವೀಂದ್ರ ಬಿಎಸ್‌ಪಿಯಿಂದ ಮದ್ದೂರು ವಿಧಾನಸಭಾ ಚುನಾವಣೆಗೆ ಒಮ್ಮೆ ಸ್ಪರ್ಧಿಸಿ ಸೋಲು ಕಂಡಿದ್ದರು. ‘ಸಂವಿಧಾನ’ದ ಬಗ್ಗೆ ಮಾತನಾಡುತ್ತಿದ್ದ ಅವರು ಕಾನೂನು ನೆರವು ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

‘ಮೃತದೇಹ ಮೇಲೆತ್ತಿ ವ್ಯಕ್ತಿಯ ಗುರುತು ಪತ್ತೆ ಮಾಡಿದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು