ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಂಡವಪುರ | ಬೈಕ್ ಕಳವು ಮಾಡಿದ್ದ ಆರೋಪಿ ಬಂಧನ

Published 30 ಜೂನ್ 2024, 14:00 IST
Last Updated 30 ಜೂನ್ 2024, 14:00 IST
ಅಕ್ಷರ ಗಾತ್ರ

ಪಾಂಡವಪುರ: ವಿವಿಧೆಡೆ ಕಳವು ಮಾಡಿದ್ದ ಸುಮಾರು ₹5.20 ಲಕ್ಷ ಬೆಲೆ ಬಾಳುವ ವಿವಿಧ ಮಾದರಿಯ 13 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂದಿಸಿದ್ದಾರೆ.

ಮೂಲತಃ ಕೆ.ಆರ್.ನಗರ ನಿವಾಸಿಯಾದ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದ ಚಲುವಚಾರಿ ಪುತ್ರ ರಾಜಾಚಾರಿ (41) ಬಂಧಿತ.

ಸಾಮಿಲ್‌ನಲ್ಲಿ ಮರ ಕೊಯ್ಯುವ ಕೆಲಸ ಮಾಡುತ್ತಿದ್ದ ಈತ ಮಂಡ್ಯ ಮತ್ತು ಮೈಸೂರು ಜಿಲ್ಲೆ ಹಾಗೂ ಮೈಸೂರು ನಗರದಲ್ಲಿ 13 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಶ್ರೀರಂಗಪಟ್ಟಣ ಡಿವೈಎಸ್‌ಪಿ ಮುರುಳಿ ಅವರ ನಿರ್ದೇಶನದಂತೆ ಪಾಂಡವಪುರ ಪೊಲೀಸ್ ಇನ್‌ಸ್ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಆರ್.ಬಿ. ಉಮೇಶ್, ಕೆ.ಸಿ. ಧರ್ಮಪಾಲ್, ಕಾನ್‌ಸ್ಟೆಬಲ್‌ಗಳಾದ ಎನ್.ಶಿವರಾಜ, ವರದರಾಜು, ಎಂ.ಕೆ. ಪ್ರಶಾಂತ, ರಾಜೇಶ್, ತೌಸಿವ್ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT