ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ‘ಹಾಲಿನಲ್ಲಿ, ವಿದ್ಯುತ್‌ನಲ್ಲಿ, ಡೀಸೆಲ್‌ನಲ್ಲಿ, ಮುಡಾದಲ್ಲಿ ಲೂಟಿ ಮಾಡಿದವರು ಯಾರು? ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. ಆಗ ‘ಲೂಟಪ್ಪ ಲೂಟಪ್ಪ, ಸಿದ್ದರಾಮಯ್ಯ ಲೂಟಪ್ಪ’ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಯಾರಿಗೆ ಕಪಾಳಮೋಕ್ಷ?
‘50 ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿರುವ ಸಿದ್ದರಾಮಯ್ಯನವರಿಗೆ ಕಪಾಳ ಮೋಕ್ಷ ಮಾಡಬೇಕೋ? ಸರ್ವಜನರ ಕಲ್ಯಾಣಕ್ಕೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಬೇಕೋ? ಬೆಲೆ ಏರಿಕೆಯಿಂದ ತತ್ತರಿಸಿರುವ ಜನಕ್ಕೆ ಯಾರಿಗೆ ಕಪಾಳಮೋಕ್ಷ ಮಾಡಬೇಕು ಎಂಬುದು ಗೊತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಜ್ಞರ ಸಮಿತಿ ರಚಿಸಿಕೊಂಡಿದ್ದು, ನಾಡಿನ ಜನರಿಗೆ ಕಪಾಳ ಮೋಕ್ಷ ಮಾಡುತ್ತಿದ್ದಾರೆ.
–ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ (ಮೈಸೂರಿನಲ್ಲಿ ನೀಡಿದ ಹೇಳಿಕೆ)
ಕಾಂಗ್ರೆಸ್ ಸರ್ಕಾರವು ತಾನು ಮಾಡಿರುವ ಬೆಲೆ ಏರಿಕೆ ಸಮರ್ಥನೆಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ಬಳಸಬಾರದು. ಪುಣ್ಯಾತ್ಮ ಮೋದಿ ಗ್ಯಾಸ್ ಸಿಲಿಂಡರ್ ಅನ್ನು ₹ 300 ಕಡಿಮೆ ಮಾಡಿ, ಈಗ 50 ರೂಪಾಯಿ ಹೆಚ್ಚಿಸಿದ್ದಾರೆ.