ಮಂಗಳವಾರ, ಮಾರ್ಚ್ 28, 2023
31 °C

‘ಸರ್ಕಾರಿ ಆಸ್ತಿ ಮಾರಾಟ ಮಾಡುವುದೇ ಬಿಜೆಪಿಗರ ಕೆಲಸ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವುದು, ಖಾಸಗೀಕರಣ ಮಾಡುವುದು, ಕಾರ್ಪೋರೇಷನ್ ಆಸ್ತಿ ಗುತ್ತಿಗೆ ನೀಡು ವುದು ಬಿಜೆಪಿಗರ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.

ಮದ್ದೂರಿನ ಶಿವಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಂಡ್ಯದ ಮೈಶುಗರ್ಸ್ ಅನ್ನು ಖಾಸಗಿಯವರಿಗೆ 40 ವರ್ಷ ಗುತ್ತಿಗೆಗೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಜನರ ಆಸ್ತಿಯನ್ನು ಉಳಿಸುವುದು ನಮ್ಮ ಕೆಲಸ. ಜನರ ಹಾಗೂ ಸರ್ಕಾರದ ಆಸ್ತಿಯನ್ನು ಮಾರುವುದು ಹಾಗೂ ಖಾಸಗಿಕರಣ ಮಾಡುವುದು ಬಿಜೆಪಿಗರ ಕೆಲಸವಾಗಿ ಬಿಟ್ಟಿದೆ. ಕೆ.ಆರ್.ಎಸ್ ನಲ್ಲಿ ಬಿರುಕು ವಿಷಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಅದನ್ನು ಗಮನಿಸಲು 40ರಿಂದ 50 ಮಂದಿ ಎಂಜಿನಿಯರ್‌ಗಳು ಇದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಗುರುಚರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.