ಶನಿವಾರ, ಡಿಸೆಂಬರ್ 7, 2019
25 °C

ಹುಟ್ಟಿ ಬೆಳೆದ ನನ್ನೂರಿಗೆ ಬರುವುದು, ಅದರ ಅಭಿವೃದ್ಧಿ ನನ್ನ ಕರ್ತವ್ಯ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ನಾನು ಹುಟ್ಟಿ ಬೆಳೆದ ನನ್ನೂರಿಗೆ ಬರುವಂತಹದ್ದು ಮತ್ತು ಅಲ್ಲಿಯ ಅಭಿವೃದ್ಧಿ ಬಗ್ಗೆ ಯೋಚಿಸುವುದು ನನ್ನ ಕರ್ತವ್ಯ. ಅದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ತಮ್ಮ ಹುಟ್ಟೂರು ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆಗೆ ಭೇಟಿ ನೀಡಲು ಶನಿವಾರ ಆಗಮಿಸಿದ ಯಡಿಯೂರಪ್ಪ ಅವರು ಮಂಡ್ಯದ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 


ಯಡಿಯೂರಪ್ಪ ಅವರು ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಿನ್ನೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ನನ್ನ ಹುಟ್ಟೂರು ಬೂಕನಕೆರೆ ಮನೆಗೆ ಹೋಗುವೆ. ಅಲ್ಲಿಂದ ಗವಿ ಮಠದಲ್ಲಿ ಸಿದ್ದಲಿಂಗೇಶ್ವ ಸ್ವಾಮಿಗೆ ಪೂಜೆ ಸಲ್ಲಿಸುವೆ. ಅಲ್ಲಿಂದ ವಾಪಸ್ ಬಂದು, ಮೇಲುಕೋಟೆಗೆ ಹೋಗಿ ದೇವರ ದರ್ಶನ ಮಾಡುವೆ. ನಂತರ ಬೆಂಗಳೂರಿಗೆ ಹಿಂದಿರುಗುವೆ ಎಂದು ತಮ್ಮ ಇಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಮನೆಯ ದೇವರು ಎಡೆಯೂರು ಸಿದ್ಧಲಿಂಗೇಶ್ವರ ಮತ್ತು ಇಲ್ಲಿಯ ಸಿದ್ಧಲಿಂಗೇಶ್ವರ ದೇವರಿಗೂ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.


ಗ್ರಾಮದಲ್ಲಿ ಯಡಿಯೂರಪ್ಪ ಅವರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.

ಸಂಪುಟ ರಚನೆ ಯಾವಾಗ ಆಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಸವರಾಜ ಬೊಮ್ಮಾಯಿ ಇತರರು ಇದ್ದರು.


ಯಡಿಯೂರಪ್ಪ ಅವರು ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

* ಇವನ್ನೂ ಓದಿ...

ಬಿಜೆಪಿ ಸರ್ಕಾರ ರಚನೆಗೆ ರಾತ್ರೋ ರಾತ್ರಿ ಶಾ ಒಪ್ಪಿದ್ದು ಏಕೆ?

ಹೋರಾಟದ ಮೂಸೆಯಲ್ಲಿ ರೂಪುಗೊಂಡ ಯಡಿಯೂರಪ್ಪ

ಯಡಿಯೂರಪ್ಪ ಮುಖ್ಯಮಂತ್ರಿ; ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ

ಇನ್ನು ಮುಂದೆ ಅಭಿವೃದ್ಧಿ ಪರ್ವ: ಬಿಎಸ್‌ವೈ ಭರವಸೆ

ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಜೆಡಿಎಸ್‌ ಶಾಸಕರ ಒಲವು?​

ಪ್ರತಿ ರೈತನಿಗೂ ಕೇಂದ್ರದ ₹6,000+ರಾಜ್ಯದ ₹4,000= ₹10 ಸಾವಿರ: ಯಡಿಯೂರಪ್ಪ ಘೋಷಣೆ​

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು