ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಒಂದೇ ದಿನ 185 ಮಂದಿಗೆ ಸೋಂಕು

Last Updated 19 ಆಗಸ್ಟ್ 2020, 16:42 IST
ಅಕ್ಷರ ಗಾತ್ರ

ಮಂಡ್ಯ: ಬುಧವಾರ ಒಂದೇ ದಿನ 185 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ 3,739ಕ್ಕೆ ಹೆಚ್ಚಾಗಿದೆ.

ಪ್ರತಿದಿನ 2 ಸಾವಿರ ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು ರೋಗಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಾ ಸಾಗುತ್ತಿದೆ. ಬುಧವಾರ ಮಂಡ್ಯ ತಾಲ್ಲೂಕಿನಲ್ಲಿ 54 ಮಂದಿ, ಕೆ.ಆರ್‌.ಪೇಟೆ 45, ಮದ್ದೂರು 32, ಮಳವಳ್ಳಿ 11, ಪಾಂಡವಪುರ 11, ಶ್ರೀರಂಗಪಟ್ಟಣ 16, ನಾಗಮಂಗಲ 15, ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌ನಿಂದ ಗುಣಮುಖರಾದ 82 ಮಂದಿಯನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 5, ಮದ್ದೂರು 8, ಪಾಂಡವಪುರ 23, ಶ್ರೀರಂಗಪಟ್ಟಣ 26, ಕೆ.ಆರ್‌.ಪೇಟೆ 11, ನಾಗಮಂಗಲದ 9 ಮಂದಿಯನ್ನು ಬಿಡುಗಡೆ ಮಾಡಲಾಯಿತು.

ಒಟ್ಟು ರೋಗಿಗಳಲ್ಲಿ 2,198 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದು 1,507 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 39 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಕೋವಿಡ್‌ ಅಂಕಿ–ಅಂಶ

ಜಿಲ್ಲೆಯಲ್ಲಿ ಒಟ್ಟು: 3,739

ಸಕ್ರಿಯ ಪ್ರಕರಣ: 1,507

ಏರಿಕೆ: 185

ಗುಣಮುಖ: 2,198

ಏರಿಕೆ: 81

ಸಾವು: 39

ಏರಿಕೆ: 00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT