ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಕಲಾಪಕ್ಕೆ ಹೆಚ್ಚು ಹಾಜರಾತಿ; ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ಸನ್ಮಾನ

Published 11 ಡಿಸೆಂಬರ್ 2023, 15:45 IST
Last Updated 11 ಡಿಸೆಂಬರ್ 2023, 15:45 IST
ಅಕ್ಷರ ಗಾತ್ರ

ಪಾಂಡವಪುರ: ರಾಜ್ಯ ವಿಧಾನಸಭೆ ಕಲಾಪಕ್ಕೆ ಹೆಚ್ಚು ಹಾಜರಾತಿ ಮತ್ತು ನಿಗದಿತ ಸಮಯದಲ್ಲಿ ಹಾಜರಿದ್ದ ಕಾರಣ ಸಭಾಧ್ಯಕ್ಷರಾದ ಯು.ಟಿ.ಖಾದರ್ ತಮಗೆ ಬಹುಮಾನ ನೀಡಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

‘ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ನಾನು ಪ್ರತಿಯೊಂದು ಕಲಾಪದಲ್ಲಿಯೂ ಭಾಗವಹಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಈ ಕರ್ತವ್ಯಪಾಲನೆಯಿಂದ ನನಗೆ ಪ್ರಥಮ ಸ್ಥಾನದ ಬಹುಮಾನ ಲಭ್ಯವಾಗಿದ್ದು, ದೊರೆತಿರುವ ಬಹುಮಾನವನ್ನು ನನ್ನ ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ’ ಎಂದರು.

‘ನನ್ನ ತಂದೆ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಸದನದ ಶೂರ ಎಂದು ಕರೆಯಲಾಗುತ್ತಿತ್ತು. ಸದನದಲ್ಲಿ ನಾನು ಕೂಡ ಅವರ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿದ್ದೇನೆ. ಸದನದಲ್ಲಿ ನನಗೆ ಸಿಗುವ ಸಮಯವನ್ನು ನನ್ನ ಕ್ಷೇತ್ರ ಹಾಗೂ ರಾಜ್ಯದ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ’ ಎಂದು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT