ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೌಲಭ್ಯ ಆಗ್ರಹಿಸಿ ಶುಶ್ರೂಷಕರ ಪ್ರತಿಭಟನೆ

Last Updated 4 ಆಗಸ್ಟ್ 2020, 12:31 IST
ಅಕ್ಷರ ಗಾತ್ರ

ಮಂಡ್ಯ: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಗೊಳಿಸಬೇಕು, ಶೇ 50 ಹೆಚ್ಚುವರಿ ಮೂಲ ವೇತನ ನೀಡಬೇಕು ಸೇರಿದಂತೆ ಕನಿಷ್ಠ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶುಶ್ರೂಷಕರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ನಗರದ ಮಿಮ್ಸ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸುಮಾರು 12 ವರ್ಷಗಳಿಂದ ಕಾಯಂ ಶುಶ್ರೂಷಾಧಿಕಾರಿ (ನರ್ಸಿಂಗ್‌ ಆಫೀಸರ್ಸ್‌) ಆಗಿ ಸೇವೆ ಸಲ್ಲಿಸುತ್ತಿದ್ದು, ಕೊರೊನಾ ಸಂಕಷ್ಟದ ಕಾಲದಲ್ಲೂ ನಮ್ಮ ಕುಟುಂಬದವರನ್ನೂ ಲೆಕ್ಕಿಸದೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದೇವೆ. ಆದರೂ ನಮಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗುತ್ತಿಲ್ಲ. ನಮ್ಮನ್ನು ಅದರಿಂದ ಹೊರಗಿಟ್ಟು ವಂಚಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಾದ ಜಯದೇವ ಹೃದ್ರೋಗ ಆಸ್ಪತ್ರೆ, ನೆಫ್ರೋ ಯುರಾಲಜಿ ಸಂಸ್ಥೆಗಳಲ್ಲಿ ಎನ್‌ಪಿಎಸ್‌ ಸೌಲಭ್ಯ ದೊರೆಯುತ್ತಿದ್ದು, ಶುಶ್ರೂಷಾಧಕಾರಿಗಳಾದ ನಮಗೆ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲ. ಕೂಡಲೇ ಅದನ್ನು ಜಾರಿಗೊಳಿಸಬೇಕು. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳು ಕೆಜಿಐಡಿ, ಡಿಸಿಆರ್‌ಜಿ ಸೇರಿದಂತೆ ಇಲಾಖೆಯ ಇತರೆ ಸೌಲಭ್ಯಗಳು ದೊರೆಯದ ಕಾರಣ ನಮಗೆ ಸೇವಾ ಭದ್ರತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ನಾವು ಇತರರಿಗೆ ಶುಶ್ರೂಷೆ ಮಾಡಿದರೂ ಅನಾರೋಗ್ಯಕ್ಕೀಡಾದರೆ ನಮಗೆ ಯಾವುದೇ ರೀತಿಯ ನಗದು ರಹಿತ ಚಿಕಿತ್ಸಾ ಸೌಲಭ್ಯಗಳಿಲ್ಲ. ಆರೋಗ್ಯ ಇಲಾಖೆಯಲ್ಲಿರುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳಿಗೂ ಜ್ಯೋತಿ ಸಂಜೀವಿನಿ ಜಾರಿಗೊಳಿಸಬೇಕು. ಅಲ್ಲದೆ ಮೂಲ ವೇತನದ ಶೇ 50 ರಷ್ಟು ಹೆಚ್ಚುವರಿ ವೇತನ ಪರಿಷ್ಕರಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಜಿ.ಸಿ.ಕೃಷ್ಣ, ಕಾರ್ಯದರ್ಶಿ ಆರ್‌.ಗಿರೀಶ್‌, ಖಜಾಂಚಿ ಎಸ್‌.ಕೆ.ಉಮೇಶ್‌, ಮಹಮದ್‌ ರಫೀ, ಸೋಮಣ್ಣ, ಚಿನ್ನಮ್ಮ, ಎಂ.ಎಚ್‌.ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT