ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷ ಪಿಂಚಣಿ ಪಡೆದ ಟಿಪ್ಪು ವಂಶಸ್ಥರು: ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್‌

‘ಟಿಪ್ಪುವನ್ನು ಕೊಂದಿದ್ದು ಉರಿಗೌಡ, ದೊಡ್ಡ ನಂಜೇಗೌಡ’
Last Updated 15 ಮಾರ್ಚ್ 2023, 4:12 IST
ಅಕ್ಷರ ಗಾತ್ರ

ಮಂಡ್ಯ: ‘ಟಿಪ್ಪು ವಂಶಸ್ಥರು ಬ್ರಿಟಿಷರಿಂದ ಸುಮಾರು 60 ವರ್ಷಗಳ ಕಾಲ ಪಿಂಚಣಿ ಪಡೆದಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌ ತಿಳಿಸಿದರು.

ಟಿಪ್ಪು ಸುಲ್ತಾನ್‌ನ 12ನೇ ಪುತ್ರ ಗುಲಾಮ್ ಮೊಹಮ್ಮದ್ ಬ್ರಿಟಿಷರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ನಗರದ ಪ್ರೆಸ್‌ಕ್ಲಬ್‌ ಆವರಣದಲ್ಲಿ ಮಂಗಳವಾರ ಬಿಡುಗಡೆ ಮಾಡಿದ ಅವರು, ‘ಟಿಪ್ಪು ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಸೆಣಸಾಡಿದನೇ ಹೊರತು ದೇಶದ ಸ್ವಾತಂತ್ರ್ಯಕ್ಕಾಗಿ ಅಲ್ಲ. ಟಿಪ್ಪುವನ್ನು ಹೊಡೆದು ಕೊಂದಿದ್ದ ಉರಿಗೌಡ, ದೊಡ್ಡ ನಂಜೇಗೌಡರ ಅನೇಕ ಸಾಕ್ಷ್ಯಾಧಾರಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವೆ’ ಎಂದರು.

‘ಉರಿಗೌಡ ಮತ್ತು ದೊಡ್ಡ ನಂಜೇಗೌಡರ ಮಹಾದ್ವಾರವನ್ನು ಮಂಡ್ಯ ನಗರದಲ್ಲಿ ಶಾಶ್ವತವಾಗಿ ನಿರ್ಮಿಸುತ್ತೇವೆ. ಹೈದರಾಲಿಯ ಮರಣದ ನಂತರ ಅವನ ಮಗ ಟಿಪ್ಪು 1782ರಲ್ಲಿ ಸುಲ್ತಾನನೆಂದು ಘೋಷಿಸಿಕೊಂಡ. ಮೈಸೂರು ಒಡೆಯರನ್ನು ಪದಚ್ಯುತಿಗೊಳಿಸಿದ. ಇದು ಒಕ್ಕಲಿಗರನ್ನು ಕೆರಳಿಸಿತ್ತು’ ಎಂದರು.

‘ಪರಕೀಯ ವ್ಯಕ್ತಿಯಿಂದ ಪರ್ಶಿಯನ್ ಭಾಷೆಯಲ್ಲಿ ಆಳ್ವಿಕೆ ಮಾಡಿಸಿಕೊಳ್ಳುವ ಗುಲಾಮಿ ಮಾನಸಿಕತೆ ಒಕ್ಕಲಿಗರದಾಗಿರಲಿಲ್ಲ. ಹೀಗಾಗಿ, ಹೋರಾಟಕ್ಕೆ ಸನ್ನದ್ಧರಾದರು. ಹೋಬಳಿಗಳ ಗೌಡರಾಗಿದ್ದ ಪಾಂಡವಪುರ ತಾಲ್ಲೂಕಿನ ಉರಿಗೌಡ, ಅಂಕನಹಳ್ಳಿಯ ದೊಡ್ಡನಂಜೇಗೌಡ, ಕೆ.ಆರ್ ಪೇಟೆ ತಾಲ್ಲೂಕಿನ ಜಗನಕೆರೆ ಬೆಟ್ಟೇಗೌಡ, ಕೆ.ಆರ್.ಪೇಟೆ ತಾಲ್ಲೂಕಿನ ಕಾಗೆಪುರದ ಸುಬ್ಬೇಗೌಡ ಹಾಗೂ ಕೇಶವನಕಟ್ಟೆ ರಾಜೇಗೌಡ ಧರ್ಮನಿಷ್ಠರಾಗಿದ್ದರು. ಮಹಾರಾಣಿ ಲಕ್ಷ್ಮಮ್ಮಣ್ಣಿಗೆ ನಿಷ್ಠರಾಗಿದ್ದರು’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT