ಕಿಕ್ಕೇರಿ: ಧರ್ಮಸ್ಥಳ ಪಾದಯಾತ್ರೆಗೆ ತೆರಳಿದ್ದ ಹೋಬಳಿಯ ಆನೆಗೊಳ ಗ್ರಾಮದ ಮತ್ತೊಬ್ಬ ಪಾದಯಾತ್ರಿ ಭಾನುವಾರ ರಾತ್ರಿ ಮೃತಪಟ್ಟರು.

ಆನೆಗೊಳ ಗ್ರಾಮದ ಮಂಜೇಗೌಡರ ಪುತ್ರ ದಿನೇಶ್ (38) ಮೃತರು. ಹಾಸನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ರಾತ್ರಿ ಮೃತಪಟ್ಟರು.

ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಗ್ರಾಮದಲ್ಲಿ ಸಣ್ಣದಾಗಿ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದರು.

ಕಳೆದ ವಾರ ಆನೆಗೊಳ ಗ್ರಾಮದಿಂದ ಬಿ.ಸಿ. ಸುರೇಶ್, ಕುಮಾರ್, ದಿನೇಶ್ ಹಾಗೂ ಅಶ್ವತ್ಥ್ ಅವರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಹಾಸನ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ಬಿ.ಸಿ. ಸುರೇಶ್, ಕುಮಾರ್ ಸ್ಥಳದಲ್ಲಿ ಮೃತರಾಗಿದ್ದರು. ಅಶ್ವತ್ಥ್ ಪಾರಾಗಿದ್ದರು. ದಿನೇಶ್ ತೀವ್ರ ಗಾಯಾಳುವಾಗಿದ್ದರು.

ಮೃತರ ತೋಟದಲ್ಲಿ ಸೋಮವಾರ ಅಂತ್ಯಕ್ರಿಯೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.