ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಈಚೆಗೆ ಉಂಟಾದ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಪಟ್ಟಣದ ವೆಲ್ಲೆಸ್ಲಿ ಸೇತುವೆ ಸಂಪರ್ಕ ರಸ್ತೆ ಹಾಗೂ ಪಟ್ಟಣದಿಂದ ಗಂಜಾಂ ಸಂಪರ್ಕ ರಸ್ತೆ ಸೇರಿದಂತೆ ₹6 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಗುರುವಾರ ಚಾಲನೆ ನೀಡಿದರು.

ವೆಲ್ಲೆಸ್ಲಿ ಸೇತುವೆ ಸಂಪರ್ಕಿಸುವ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಸಿಮೆಂಟ್‌ನಿಂದ ನಿರ್ಮಿಸಲಾಗುವುದು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಗಂಜಾಂ ಗ್ರಾಮವನ್ನು ಸಂಪರ್ಕಿಸುವ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುವುದು. ಪಟ್ಟಣ ಮತ್ತು ಗಂಜಾಂ ವ್ಯಾಪ್ತಿಯಲ್ಲಿ ಇತರ ರಸ್ತೆಗಳು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿವೆ ಎಂದು ತಿಳಿಸಿದರು.

ಜತೆಗೆ ದಸರಾ ಉತ್ಸವದ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯ ಇತರ ರಸ್ತೆಗಳನ್ನೂ ಅಭಿವೃದ್ಧಿ ಮಾಡಲಾಗುವುದು. ಆದ್ಯತೆ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನಂದೀಶ್, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಸದಸ್ಯ ಎಂ.ಎಲ್. ದಿನೇಶ್, ಎಇಇ ಜಸ್ವಂತ್, ಮುಖಂಡರಾದ ಎಲ್. ನಾಗರಾಜು, ಚನ್ನಪ್ಪ, ಎಂ. ಸುರೇಶ್, ಎಂ. ಲೋಕೇಶ್, ಆರ್. ಕೃಷ್ಣ, ಬಾಲು, ರಜಿನಿ, ರವಿಕುಮಾರ್, ಸೋಮಸುಂದರ್, ಗೋವಿಂದೇಗೌಡ, ಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.