ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ನಗರದಲ್ಲಿ ಕಾಣಿಸಿಕೊಂಡ ಆನೆಗಳು: ಮುತ್ತತ್ತಿ ಕಾಡಿಗಟ್ಟಲು ಸಿದ್ಧತೆ

Published 6 ಆಗಸ್ಟ್ 2024, 14:22 IST
Last Updated 6 ಆಗಸ್ಟ್ 2024, 14:22 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಮ‌ತ್ತು ಮಂಡ್ಯ ತಾಲ್ಲೂಕಿನ ಗಡಿಭಾಗದಲ್ಲಿ ಕಳೆದ ಮೂರು ದಿನಗಳಿಂದ ಸಂಚರಿಸುತ್ತಿರುವ ಕಾಡಾನೆಗಳು ಸದ್ಯಕ್ಕೆ ನಗರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಉಂಟು ಮಾಡಿವೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಮಂಡ್ಯ ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ಸೋಮವಾರ ರಾತ್ರಿಯಿಂದ ನಗರದ ಕಲ್ಲಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ಸ‌ದ್ವಿದ್ಯಾ ಶಾಲೆ ಬಳಿಯ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.

ನಗರದ ಹೊರವಲಯದ ಮಳವಳ್ಳಿ ಸಂಪರ್ಕಿಸುವ ಹನಿಯಂಬಾಡಿ ರಸ್ತೆಯ ಸುತ್ತಮುತ್ತವಿರುವ ಗದ್ದೆ ಬಯಲಿನಲ್ಲಿ ಎರಡು ಆನೆಗಳು ತಿರುಗಾಡುತ್ತಿರುವ ದೃಶ್ಯ ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮೊದಲು ಕಲ್ಲಹಳ್ಳಿ ವಿವಿ ನಗರ ಭಾಗದಲ್ಲಿ ಕಾಣಿಸಿಕೊಂಡಿರುವ ಆನೆಗಳನ್ನು ನೋಡಿದ ನಾಯಿಗಳು ಬೊಗಳಿವೆ. ಸ್ಥಳೀಯರಿಗೂ ಕಾಣಿಸಿಕೊಂಡಿವೆ. ನಂತರ ನಗರದ ಹೊರವಲಯದ ಕಬ್ಬಿನ ಗದ್ದೆಯಲ್ಲಿರುವುದರಿಂದ ಅತ್ತ ಯಾರೂ ಸುಳಿಯದಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿ ಸ್ಥಳಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಮಂಗಳವಾರ ರಾತ್ರಿ ವೇಳೆಗೆ ಕಾರ್ಯಾಚರಣೆ ನಡೆಸುವ ಅಧಿಕಾರಿಗಳು ಮುತ್ತತ್ತಿ ಕಾಡಿಗಟ್ಟಲು ಸಿದ್ಧತೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT