ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿ ಪ್ರಚಾರ: ಬಂಧನ

Last Updated 16 ಏಪ್ರಿಲ್ 2020, 13:17 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಹಕ್ಕಿಮಂಚನಹಳ್ಳಿ ಯುವಕನೊಬ್ಬ ಕೊರೊನಾ ಬಂದು ಸಾವನ್ನಪ್ಪಿದ್ದಾನೆಂದು ಟಿವಿ ಪರದೆ ಮೇಲೆ ಬಿಗ್ ಬ್ರೇಕಿಂಗ್‌ ಸುದ್ದಿ ಬಂದಿರುವಂತೆ ಫೋಟೊ ಎಡಿಟ್ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನು ನೋಡಿ ತಾಲ್ಲೂಕಿನಲ್ಲಿ ಆತಂಕ ಸೃಷ್ಟಿಯಾಗಿ ಜನ ಕಂಗಾಲಾಗಿದ್ದರು. ಪೋಟೊದಲ್ಲಿದ್ದ ಯುವಕ ಸುನಿಲ್ ‘ತಾನು ಆರೋಗ್ಯವಾಗಿದ್ದು ಕೊರೊನಾ ಬಂದಿಲ್ಲ. ಚೆನ್ನಾಗಿದ್ದೇನೆ. ನನ್ನ ಬಗ್ಗೆ ಸುಳ್ಳು ಹಬ್ಬಿಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ವಾಟ್ಸ್‌ಆ್ಯಪ್‌ ವಿಡಿಯೊ ಮಾಡಿ ಮನವಿ ಮಾಡಿದ್ದನು. ಕಾರ್ಯಪ್ರವೃತತ್ರಾದ ಪೊಲೀಸರುವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದ ಮುತ್ತುರಾಜು ಎಂಬುವವನನ್ನು ಎಸ್.ಐ ಬ್ಯಾಟರಾಯೀಗೌಡ ಬಂಧಿಸಿದ್ದಾರೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT