ರೈತರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ಎಸ್.ಯು. ಅಶೋಕ್ ಮಾತನಾಡಿ ‘ಪೌತಿಖಾತೆ ವಿಳಂಬವಾಗದಂತೆ ಕ್ರಮವಹಿಸಲಾಗಿದೆ. ರೈತರ ದಾಖಲೆಗಳ ಸಂರಕ್ಷಣೆಗೆ ಕ್ರಮ ವಹಿಸಿದ್ದು ದಾಖಲೆ ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ. ತೇಗನಹಳ್ಳಿ ಸರ್ಕಾರಿ ಕೆರೆ ಒತ್ತುವರಿ ಸಂಬಂಧ ಒಂದೆರಡು ದಿನಗಳಲ್ಲಿಯೇ ಸ್ಥಳ ಪರಿಶೀಲನೆ ಮಾಡಿ ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಎಪಿಎಂಸಿ ಜಾಗದ ಪ್ರಕರಣ ನ್ಯಾಯಾಲಯದಲ್ಲಿದ್ದು ಕೋರ್ಟ್ ಆದೇಶದಂತೆ ಮುಂದಿನ ಕ್ರಮ ವಹಿಸಲಾಗುವುದು. ಸರ್ಕಾರಿ ಪಾಲಿಟೆಕ್ನಿಕ್‌ನ ಹಿಂಭಾಗದ ಕೃಷಿ ಜಮೀನಿಗೆ ಹೋಗುವ ರಸ್ತೆಗೆ ಶೀಘ್ರ ಜಾಗ ಕಲ್ಪಿಸಲಾಗುವುದು ಎಂದು ತಿಳಿಸಿದರು.